ಫೀಸ್ ಬೇಡ, ತೆಂಗಿನ ಕಾಯಿ ಕೊಟ್ಟರೆ ಸಾಕು ಎಂದ ಕಾಲೇಜ್! - Mahanayaka

ಫೀಸ್ ಬೇಡ, ತೆಂಗಿನ ಕಾಯಿ ಕೊಟ್ಟರೆ ಸಾಕು ಎಂದ ಕಾಲೇಜ್!

04/11/2020

ಬಾಲಿ: ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವದಲ್ಲಿಯೇ ಆರ್ಥಿಕ ಸ್ಥಿತಿ ಪಾತಾಳಕ್ಕಿಳಿದಿದೆ. ಇದೇ ಸಂದರ್ಭದಲ್ಲಿ ಮಕ್ಕಳ ಸ್ಕೂಲ್ ಫೀಸ್ ನೀಡಲಾಗದೇ ಪೋಷಕರು ಸಂಕಷ್ಟದಲ್ಲಿದ್ದಾರೆ. ಕೆಲವು ಶಾಲೆಗಳು ಕೂಡ ಫೀಸ್ ಕಟ್ಟಿ ಎಂದು ಪೋಷಕರನ್ನು ಬೆದರಿಸುತ್ತಿರುವುದರ ನಡುವೆಯೇ ಇಲ್ಲೊಂದು ಕಾಲೇಜ್ “ನಮಗೆ ಫೀಸ್ ಹಣದ ರೂಪದಲ್ಲಿ ಬೇಡ, ನಮಗೆ ತೆಂಗಿನ ಕಾಯಿಯ ರೂಪದಲ್ಲಿ ಕೊಡಿ” ಎಂದು ಕೇಳಿ ವಿಶ್ವಕ್ಕೆ ಅಚ್ಚರಿಯನ್ನು ಸೃಷ್ಟಿ ಮಾಡಿದೆ.


ಇಂಡೋನೇಶಿಯಾದ ಬಾಲಿಯ ಕಾಲೇಜ್ ತೆಂಗಿನಕಾಯಿಯನ್ನು  ಫೀಸ್ ಆಗಿ ಪಡೆದುಕೊಳ್ಳಲು ಮುಂದಾಗಿದೆ. ಇಲ್ಲಿನ ವೀನಸ್ ಒನ್ ಟೂರಿಸಂ ಅಕಾಡೆಮಿಯುಕಾಲೇಜ್ , ಫೀಸ್ ನ್ನು ತೆಂಗಿನ ಕಾಯಿ ರೂಪದಲ್ಲಿ ಪಡೆದುಕೊಳ್ಳಲು ನಿರ್ಧರಿಸಿದೆ.


ಸಂಕಷ್ಟದ ಕಾಲಕ್ಕೆ ನಾವು ಹೊಂದಿಕೊಳ್ಳಬೇಕು. ವಿದ್ಯಾರ್ಥಿಗಳು ನೀಡುವ ತೆಂಗಿನ ಎಣ್ಣೆಯಿಂದ ಕಚ್ಚಾ ಎಣ್ಣೆಯನ್ನು ತೆಗೆಯಲಾಗುವುದು ಮತ್ತು ಗಿಡಮೂಲಿಕೆಗಳಿಂದ ತಯಾರಿಸಲಾಗುವ ಸಾಬೂನು ಮೊದಲಾದ ಉತ್ಪನ್ನಗಳಿಗೆ ಈ ತೆಂಗಿನ ಕಾಯಿಯನ್ನು ಬಳಸಲಾಗುವುದು. ತೆಂಗಿನ ಕಾಯಿ ಮಾತ್ರವಲ್ಲದೇ ಇತರ ಉತ್ಪನ್ನ ವಸ್ತುಗಳನ್ನೂ ಫೀಸ್ ರೂಪದಲ್ಲಿ ನೀಡಬಹುದು ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.


ವಿದ್ಯಾರ್ಥಿಗಳ ಉದ್ಯಮಶೀಲತೆಯ ಕೌಶಲ್ಯಗಳನ್ನು ಹೆಚ್ಚಿಸಲು ಈ ರೀತಿಯ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಬೇಕು. ಸುತ್ತಮುತ್ತಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಉತ್ತಮಗೊಳಿಸಲು ಅವರಿಗೆ ಶಿಕ್ಷಣ ನೀಡಬೇಕಿದೆ. ಇದರಿಂದ ಸಾಂಕ್ರಾಮಿಕ ರೋಗ ಮಾಡಿದ ನಷ್ಟವನ್ನು ಮುಂದಿನ ದಿನಗಳಲ್ಲಿ ಸರಿಪಡಿಸಬಹುದು ಎಂದು ಸಂಸ್ಥೆಯ ಅಧಿಕಾರಿಗಳು ಹೇಳುತ್ತಾರೆ.


ಇತ್ತೀಚಿನ ಸುದ್ದಿ