ಅಮೆರಿಕ ಚುನಾವಣಾ ಫಲಿತಾಂಶದ ಬಳಿಕ ಹಿಂಸಾಚಾರದ ಸಾಧ್ಯತೆ! - Mahanayaka

ಅಮೆರಿಕ ಚುನಾವಣಾ ಫಲಿತಾಂಶದ ಬಳಿಕ ಹಿಂಸಾಚಾರದ ಸಾಧ್ಯತೆ!

04/11/2020

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಟ್ರಂಪ್ ಸೋಲಿನ ಸುಳಿವು ಲಭ್ಯವಾಗುತ್ತಿದ್ದಂತೆಯೇ ಶ್ವೇತ ಭವನ, ಪೆಂಟಗಾನ್ ಮತ್ತು ಇತರ ಉದ್ಯಮ ಸಂಸ್ಥೆಗಳಿಗೆ ಭಾರೀ ಭದ್ರತೆ ನೀಡಲಾಗಿದೆ.


ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿರುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ ಹೇಳಿಕೆ ಈ ಭದ್ರತೆಗೆ ಕಾರಣವಾಗಿದೆ. ಅಮೆರಿಕ ಚುನಾವಣೆಯ ಫಲಿತಾಂಶದ ಬಳಿಕ ಹಿಂಸಾಚಾರ ನಡೆಯಬಹುದು ಎಂದು ಟ್ರಂಪ್ ಹೇಳಿದ್ದರು.  ಈ ಹಿನ್ನೆಲೆಯಲ್ಲಿ 18 ಪ್ರಾಂತ್ಯಗಳಿಗೆ ಹೆಚ್ಚುವರಿಯಾಗಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.]


ನ್ಯೂಯಾರ್ಕ್, ಬಾಸ್ಟನ್, ಶಿಕಾಗೋ, ಸ್ಯಾನ್ ಫ್ರಾನ್ಸಿಸ್ಕೋಗಳಲ್ಲಿ ಉದ್ದಿಮೆಗಳು ಮತ್ತು ವಾಣಿಜ್ಯ ಮಳಿಗೆಗಳ ಮಾಲಕರು ಹಾಗೂ ಸಿಬ್ಬಂದಿಗಳು ಟ್ರಂಪ್ ಬೆಂಬಲಿಗರು ನುಗ್ಗಿ ದಾಂಧಲೆ ಮಾಡದಂತೆ ಫ್ಲೈವುಡ್ ನ ತಡೆಗೋಡೆ ನಿರ್ಮಿಸಿದ್ದಾರೆ ಎಂದು ವರದಿಯಾಗಿದೆ.Provided by

ಇತ್ತೀಚಿನ ಸುದ್ದಿ