ಅಹಂಕಾರಿಗಳನ್ನು ಶ್ರೀರಾಮ 241ಕ್ಕೆ ತಡೆದು ನಿಲ್ಲಿಸಿದ: ಬಿಜೆಪಿ ವಿರುದ್ಧ ಆರ್ ಎಸ್ಎಸ್ ನಾಯಕ ವಾಗ್ದಾಳಿ - Mahanayaka

ಅಹಂಕಾರಿಗಳನ್ನು ಶ್ರೀರಾಮ 241ಕ್ಕೆ ತಡೆದು ನಿಲ್ಲಿಸಿದ: ಬಿಜೆಪಿ ವಿರುದ್ಧ ಆರ್ ಎಸ್ಎಸ್ ನಾಯಕ ವಾಗ್ದಾಳಿ

14/06/2024

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮಂದಗತಿಯ ಪ್ರದರ್ಶನಕ್ಕೆ “ಅಹಂಕಾರ” ಕಾರಣ ಎಂದು ಆರ್ ಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಹೀಗಾಗಿ
ಬಿಜೆಪಿ ತನ್ನ ಸೈದ್ಧಾಂತಿಕ ಮಾರ್ಗದರ್ಶಕರಿಂದ ಟೀಕೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿದೆ.


Provided by

ಜೈಪುರ ಬಳಿಯ ಕನೋಟಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಂದ್ರೇಶ್ ಕುಮಾರ್, “ಭಗವಾನ್ ರಾಮನ ಭಕ್ತಿಯನ್ನು ತೋರಿಸಿದವರು ಕ್ರಮೇಣ ಅಹಂಕಾರಿಗಳಾದರು. ಆ ಪಕ್ಷವನ್ನು ಅತಿದೊಡ್ಡ ಪಕ್ಷವೆಂದು ಘೋಷಿಸಲಾಯಿತು. ಆದರೆ ಅಹಂಕಾರದಿಂದಾಗಿ ಭಗವಾನ್ ರಾಮನು 241 ಕ್ಕೆ ನಿಲ್ಲಿಸಿದನು” ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ 240 ಸ್ಥಾನಗಳನ್ನು ಗೆದ್ದರೂ ಬಹುಮತದ ಗಡಿ ದಾಟಲು ವಿಫಲವಾದ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಲಾಗಿದೆ. ಇದು 2014 ರ ನಂತರ ಪಕ್ಷದ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ ಎಂದಿದ್ದಾರೆ.

ಸಾರ್ವಜನಿಕ ಸೇವೆಯಲ್ಲಿ ನಮ್ರತೆಯ ಮಹತ್ವವನ್ನು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬೋಧಿಸಿದ ಕೆಲವು ದಿನಗಳ ನಂತರ ಆರ್ ಎಸ್ಎಸ್ ನಾಯಕ ಈ ಹೇಳಿಕೆ ನೀಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ