ಪ್ರಪಾತಕ್ಕೆ ಬಿದ್ದ ಕಾರು: ಚಾಲಕ ಸಹಿತ ಮೂವರ ದುರ್ಮರಣ - Mahanayaka

ಪ್ರಪಾತಕ್ಕೆ ಬಿದ್ದ ಕಾರು: ಚಾಲಕ ಸಹಿತ ಮೂವರ ದುರ್ಮರಣ

car accident
28/12/2024

ಪುತ್ತೂರು: ಕಾರೊಂದು ಪ್ರಪಾತಕ್ಕೆ ಬಿದ್ದ ಪರಿಣಾಮ ಚಾಲಕ ಸಹಿತ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೈಪಾಸ್ ರಸ್ತೆಯ ಪರ್ಲಡ್ಕ ಎಂಬಲ್ಲಿ ನಡೆದಿದೆ.

ಸುಳ್ಯ ಜಟ್ಟಿಪಲ್ಲ ನಿವಾಸಿ ಅಣ್ಣು ನಾಯ್ಕ(85) ಹಾಗೂ ಅವರ ಪುತ್ರ ಚಾಲಕ ಚಿದಾನಂದ ನಾಯ್ಕ(58) ಸ್ಥಳೀಯ ನಿವಾಸಿ ರಮೇಶ್ ನಾಯ್ಕ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಪುಣಚ ಗ್ರಾಮದ ದಂಬೆ ಅಪ್ಪುಮೂಲೆ ಎಂಬಲ್ಲಿ ಕುಟುಂಬದ ಗೋಂಡೋಲು ಪೂಜೆ ಕಾರ್ಯಕ್ರಮಕ್ಕೆ ಹೋಗಿದ್ದ ಇವರು ಆಲ್ಟೋ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪುತ್ತೂರು ಬೈಪಾಸ್ ರಸ್ತೆ ಬದಿಯ ಪ್ರಪಾತಕ್ಕೆ ಬಿದ್ದಿದೆ. ಪರಿಣಾಮವಾಗಿ ಮೂವರು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ