ಕೊರೊನಾ ಪಾಸಿಟಿವ್ ಬಳಿಕ ಹೃದಯಾಘಾತದಿಂದ ಶಾಸಕ ನಿಧನ - Mahanayaka

ಕೊರೊನಾ ಪಾಸಿಟಿವ್ ಬಳಿಕ ಹೃದಯಾಘಾತದಿಂದ ಶಾಸಕ ನಿಧನ

01/12/2020

ನವದೆಹಲಿ: ಕೊರೊನಾ ಪಾಸಿಟಿವ್ ಆಗಿ ಆ ಬಳಿಕ ಚೇತರಿಸಿಕೊಂಡಿದ್ದ ಟಿಆರ್ ಎಸ್ ಶಾಸಕ ನೋಮುಲಾ ನರಸಿಂಗಯ್ಯ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತೆಲಂಗಾಣದ ನಾಗರ್ಜುನ ಸಾಗರ್ ಕ್ಷೇತ್ರದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಶಾಸಕರಾಗಿರುವ ನೋಮುಲಾ ನರಸಿಂಗಯ್ಯ ಅವರು,  ಪ್ರಸ್ತುತ ತೆಲಂಗಾಣದ ಆಡಳಿತ ಸಮಿತಿಯ ಸದಸ್ಯರಾಗಿದ್ದರು.

ಕೊರೊನಾ ವಯರಸ್ ಕಾಣಿಸಿಕೊಂಡ ಬಳಿಕ ಅವರು ತೀವ್ರ ಅನಾರೋಗ್ಯವನ್ನು ಎದುರಿಸಿದ್ದು, ಕೆಲವು ಸಮಯಗಳ ವರೆಗೆ ಅವರು ಹೈದರಾಬಾದ್ ನ ಹೈದರ್ ಗುಡಾ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಇಂದು ಮುಂಜಾನೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿಯೇ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.


ತೆಲಂಗಾಣದ ನಕ್ರೇಕಲ್ ಮಂಡಲ್ ನಲ್ಗೊಂಡ ಜಿಲ್ಲೆಯ ಪಾಲೆಮ್ ಗ್ರಾಮದ ಯಾದವ್ ಸಮುದಾಯದಲ್ಲಿ ಜನಿಸಿದ ನರಸಿಂಹಯ್ಯ, ಕಮ್ಯುನಿಸ್ಟ್ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದರು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ (ಎಂಎ) ಮತ್ತು ಬ್ಯಾಚುಲರ್ ಆಫ್ ಲಾಸ್ (ಎಲ್ಎಲ್ಬಿ) ಪಡೆದರು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ( ಮಾರ್ಕ್ಸ್ ವಾದಿ)ಗೆ ಸೇರುವ ಮೊದಲು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾವನ್ನು ಸಕ್ರಿಯವಾಗಿ ಅವರು ಮುನ್ನಡೆಸಿದ್ದರು.

ಇತ್ತೀಚಿನ ಸುದ್ದಿ