ಸ್ನಾನ ಮಾಡಲು ಹೋದ ಇಬ್ಬರು ಬಾಲಕಿಯರು ಬಾವಿಗೆ ಬಿದ್ದು ಸಾವು - Mahanayaka

ಸ್ನಾನ ಮಾಡಲು ಹೋದ ಇಬ್ಬರು ಬಾಲಕಿಯರು ಬಾವಿಗೆ ಬಿದ್ದು ಸಾವು

koppa news
01/06/2024

ಕೊಪ್ಪಳ: ಮನೆಯ ಸಮೀಪದಲ್ಲಿರುವ ಬಾವಿಗೆ ಕಾಲು ಜಾರಿ ಬಿದ್ದು ಇಬ್ಬರು ಬಾಲಕಿಯರು ಸಾವಿಗೀಡಾಗಿರುವ ದಾರುಣ ಘಟನೆ ಕೊಪ್ಪಳ ತಾಲೂಕಿನ ಜಿನ್ನಾಪೂರ ತಾಂಡಾದ ಹೊರವಲಯದ ಜಮೀನನಲ್ಲಿ ನಡೆದಿದೆ.


Provided by

ಸೌಂದರ್ಯ (10), ಹಾಗೂ ಲಕ್ಷ್ಮಿ (10) ಮೃತಪಟ್ಟ ಬಾಲಕಿಯರು ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾವಿಗೆ ಸ್ನಾನಕ್ಕೆ ಇಳಿದ ಬಾಲಕಿಯರು ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಇಬ್ಬರು ಬಾವಿಗೆ ಬಿದ್ದಿರುವುದನ್ನು ಕಂಡು ಇತರ ಮಕ್ಕಳು ಕೂಗಾಡಿದ್ದು, ಈ ವೇಳೆ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮಕ್ಕಳನ್ನು ರಕ್ಷಣೆ ಮಾಡಲು ಯತ್ನಿಸಿದರು. ಆದರೆ, ಅದಾಗಲೇ ಮಕ್ಕಳು ಸಾವಿಗೀಡಾಗಿದ್ದರು.


Provided by

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ  ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ಕೊಟ್ಟು ಬಾಲಕಿಯರ ಮೃತದೇಹವನ್ನು ಹೊರ ತೆಗೆದಿದ್ದಾರೆ.

ಮೃತ ಬಾಲಕಿ ಸೌಂದರ್ಯ ಜಿನ್ನಾಪುರ ದೊಡ್ಟ ತಾಂಡಾದ ರತ್ನಪ್ಪ ಹಾಗೂ ಮಂಜುಳಾ ದಂಪತಿಗಳ ಮಗಳಾಗಿದ್ದಾಳೆ. ಲಕ್ಷ್ಮಿ ಶರಣಪ್ಪ ಸರೋಜಮ್ಮ ದಂಪತಿ ಪುತ್ರಿಯಾಗಿದ್ದಾಳೆ. ಮಕ್ಕಳಿಬ್ಬರನ್ನು ಕಳೆದುಕೊಂಡ ಪಾಲಕರ ರೋದನೆ ಮುಗಿಲು ಮುಟ್ಟಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ