ವಾಲ್ಮೀಕಿ ಅಭಿವೃದ್ಧಿ ನಿಗಮದ ಮೃತ ಅಧೀಕ್ಷಕ ಚಂದ್ರಶೇಖರನ್ ಪತ್ನಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಮೃತ ಅಧೀಕ್ಷಕ ಚಂದ್ರಶೇಖರನ್ ಅವರ ಪತ್ನಿ ಕವಿತಾ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ.
ತಮ್ಮ ಪತಿ ಸಾವಿಗೆ ಶರಣಾದ ದಿನದಿಂದ ಸರಿಯಾಗಿ ಊಟ ಸೇವಿಸದ ಹಿನ್ನೆಲೆ ಕವಿತಾ ಅವರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನನ್ನ ಗಂಡನ ಸಾವಿಗೆ ನ್ಯಾಯ ಸಿಗಬೇಕು, ಗಂಡನ ಆತ್ಮಕ್ಕೆ ಶಾಂತಿ ಸಿಗಬೇಕು. ಕಚೇರಿಯಲ್ಲಿ ನಡೆದಿರುವ ಸತ್ಯ ಹೊರಬರಬೇಕು. ನಮಗೆ ನ್ಯಾಯ ಬೇಕು ಎಂದು ಕವಿತಾ ಅವರು ಆಸ್ಪತ್ರೆಗೆ ದಾಖಲಾಗುವುದಕ್ಕೂ ಮೊದಲು ಹೇಳಿಕೆ ನೀಡಿದರು.
ನ್ಯಾಯ ಕೊಡಿಸುತ್ತೇವೆ ಎಂದು ಎಲ್ಲಾ ನಾಯಕರು ಹೇಳಿದ್ದಾರೆ. ನಿಗಮದ ಅಧಿಕಾರಿಗಳ ಬಂಧನ ಆಗಿದೆ ಅಷ್ಟೇ, ಅವರಿಗೆ ಶಿಕ್ಷೆ ಆಗಬೇಕು. ಬ್ಯಾಂಕಿನ ಅಧಿಕಾರಿ ಅರೆಸ್ಟ್ ಆಗಿಲ್ಲ. ಒಬ್ಬ ಹೆಣ್ಣು ಮಗಳ ಗೋಳು ಗೊತ್ತಾಗಬೇಕಾದರೆ ಬ್ಯಾಂಕ್ ಅಧಿಕಾರಿ ಬಂಧನವಾಗಬೇಕು. ಯಾವ ತನಿಖೆ ಆಗಲಿ, ಸತ್ಯ ಹೊರಬರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆಫೀಸ್ ನಲ್ಲಿ ಏನು ನಡೆದಿದೆ, ಎಲ್ಲವೂ ಹೊರ ಬರಬೇಕು. ನನ್ನ ಗಂಡನಿಗೆ ಒತ್ತಡ ಹಾಕಿದ್ದಾರೆ. ಈ ಪ್ರಕರಣ ಸಾಕಷ್ಟು ಜನ ಇದ್ದಾರೆ, ಅದೆಲ್ಲಾ ತನಿಖೆಯಿಂದ ಹೊರ ಬರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: