ಉಜಿರೆ: ಬಾಲಕನ ಅಪಹರಣ ಪ್ರಕರಣದ ಕಿಂಗ್ ಪಿನ್ ಹೆಸರು ಬಯಲು | ಸ್ವಲ್ಪ ಮಿಸ್ ಆಗುತ್ತಿದ್ದರೆ, ಬಾಲಕ ಮತ್ತೆ ಸಿಗುವುದು ಕಷ್ಟವಿತ್ತು! - Mahanayaka

ಉಜಿರೆ: ಬಾಲಕನ ಅಪಹರಣ ಪ್ರಕರಣದ ಕಿಂಗ್ ಪಿನ್ ಹೆಸರು ಬಯಲು | ಸ್ವಲ್ಪ ಮಿಸ್ ಆಗುತ್ತಿದ್ದರೆ, ಬಾಲಕ ಮತ್ತೆ ಸಿಗುವುದು ಕಷ್ಟವಿತ್ತು!

25/12/2020

ಮಂಗಳೂರು: ಉಜಿರೆಯ 8 ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ವಿವರಗಳು ಪೊಲೀಸರಿಗೆ ಕೊನೆಗೂ ಲಭ್ಯವಾಗಿದ್ದು,  ಬಾಲಕನ ತಂದೆ, ಉದ್ಯಮಿ ಬಿಜೊಯ್ ಅವರಿಗೆ ಪರಿಚಿತ ವ್ಯಕ್ತಿಯೇ ಈ ಅಪಹರಣ ಕಿಂಗ್ ಪಿನ್ ಎನ್ನುವುದು ಬಯಲಾಗಿದೆ.


Provided by

ಹಾಸನ ಜಿಲ್ಲೆಯ ಸಕಲೇಶಪುರದ ಪ್ರದೀಪ್ ಎನ್ನುವವನೇ ಅಪಹರಣ ಪ್ರಕರಣದ ಕಿಂಗ್ ಪಿನ್ ಆಗಿದ್ದಾನೆ. ಬಾಲಕನ ತಂದೆ ಬಿಜೋಯ್ ಬಳಿಲ್ಲಿ 250 ಕೋಟಿ ಬಿಟ್ ಕಾಯಿನ್ ಇದೆ ಎನ್ನುವುದನ್ನು ತಿಳಿದಿದ್ದ ಪ್ರದೀಪ್ ಬಾಲಕನ ಅಪಹರಣ ಮಾಡಿದ ಬಳಿಕ  ಅಜ್ಞಾತ ಸ್ಥಳದಲ್ಲಿ ಕುಳಿತು, ಬಿಜೋಯ್ ಗೆ ಕರೆ ಮಾಡಿದ್ದ ಪ್ರದೀಪ್, ಮೊದಲು 100 ಬಿಟ್ ಕಾಯಿನ್ ಗಾಗಿ ಬೇಡಿಕೆಯಿಟ್ಟಿದ್ದ.

ಬಾಲಕನನ್ನು ಕಿಡ್ನಾಪ್ ಮಾಡಿದ ಬಳಿಕ ಕೋಲಾರ ಮೂಲಕ ಆಂಧ್ರಪ್ರದೇಶಕ್ಕೆ ಸಾಗಿಸಬೇಕು ಎಂದು ಪ್ರದೀಪ್ ಪ್ಲಾನ್ ಮಾಡಿದ್ದ. ಬಾಲಕ ಕೋಲಾರದಿಂದ ಸ್ವಲ್ಪ ಮಿಸ್ ಆಗಿದ್ದರೂ ಕೂಡ  ಬಾಲಕನನ್ನು ಆಂಧ್ರಗಡಿ ದಾಟಿಸುತ್ತಿದ್ದರು. ಸದ್ಯ ಅಪಹರಣದ ಮಾಸ್ಟರ್ ಮೈಂಡ್ ಪ್ರದೀಪ್ ಬಂಧನಕ್ಕಾಗಿ ಪೊಲೀಸರು ಆತನ ಸಕಲೇಶಪುರ ಮನೆಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಆದರೆ ಅಪಹರಣಕಾರರ ಬಂಧನದ ಸುದ್ದಿ ಕೇಳಿ ಆತ ಪರಾರಿಯಾಗಿದ್ದಾನೆ.

ಸದ್ಯದ ಮಾಹಿತಿಯ ಪ್ರಕಾರ ಪ್ರದೀಪ್ ಮಧ್ಯಪ್ರದೇಶದಲ್ಲಿ  ಅಡಗಿದ್ದಾನೆ ಎನ್ನಲಾಗಿದೆ. ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈತನ ಬಂಧನವಾದರೆ, ಕೇವಲ ಅಪಹರಣ ಮಾತ್ರವಲ್ಲದೇ ಎಲ್ಲ ಅಕ್ರಮಗಳ ಬಗ್ಗೆ ಪೊಲೀಸರು ತನಿಖೆ ನಡೆಸುವ ಸಾಧ್ಯತೆಗಳಿವೆ.

ಇತ್ತೀಚಿನ ಸುದ್ದಿ