ಕೊರೊನಾ ಲಸಿಕೆಯಲ್ಲಿ ಹಂದಿ ಇದೆಯೇ ಗೋವು ಇದೆಯೇ? | ಭಾರತದ ಹಿಂದೂ-ಮುಸ್ಲಿಮರಲ್ಲಿ ತಳಮಳ! - Mahanayaka

ಕೊರೊನಾ ಲಸಿಕೆಯಲ್ಲಿ ಹಂದಿ ಇದೆಯೇ ಗೋವು ಇದೆಯೇ? | ಭಾರತದ ಹಿಂದೂ-ಮುಸ್ಲಿಮರಲ್ಲಿ ತಳಮಳ!

25/12/2020

ಮುಂಬೈ: ಇನ್ನೂ ಕೊರೊನಾ ಲಸಿಗೆ ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎನ್ನುವುದನ್ನೇ ಪತ್ತೆ ಹಚ್ಚಲಾಗಿಲ್ಲ. ಇದರ ನಡುವೆಯೇ ಕೊರೊನಾ ಲಸಿಕೆಯಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಹಿಂದೂ ಮತ್ತು ಮುಸ್ಲಿಮ್  ಸಂಘಟನೆಗಳು ಹೇಳಿಕೊಂಡಿವೆ.


Provided by

ಚೀನಾದಲ್ಲಿ ತಯಾರಾಗುವ ಲಸಿಕೆಯಲ್ಲಿ  ಹಂದಿ ಮಾಂಸದ ಜಿಲಾಟಿನ್ ಅಂಶ ಬಳಸಲಾಗುತ್ತಿದ್ದು, ಹಾಗಾಗಿ ಇಸ್ಲಾಮ್ ಧರ್ಮದವರಿಗೆ ಇದು ಹರಾಮ್ ಆಗಿದೆ. ಹಾಗಾಗಿ ಮುಸ್ಲಿಮರು ಈ ಲಸಿಕೆ ಪಡೆಯಬಾರದು ಎಂದು ಮುಂಬೈ ರಾಜಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಸಯೀದ್ ನೂರಿ ಸುನ್ನಿ ಮುಸ್ಲಿಮ್ ಸಭೆಯಲ್ಲಿ ಹೇಳಿಕೆ ನೀಡಿರುವ ಬಗ್ಗೆ ವರದಿಯಾಗಿದೆ.

ಸರ್ಕಾರವು ಕೊರೊನಾ ಲಸಿಕೆಯಲ್ಲಿ ಯಾವ ಜಿಲೆಟಿನ್ ಅಂಶಗಳಿವೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಚೀನಾದಿಂದ ಕೊರೊನಾ ಲಸಿಕೆ ಆಮದು ಮಾಡಬಾರದು ಎಂದು ಸಯೀದ್ ನೂರಿ ಒತ್ತಾಯಿಸಿದ್ದಾರೆ. ಈ ನಡುವೆ,  ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇಸ್ಲಾಮ್ ನಲ್ಲಿ ಹಂದಿ ಉತ್ಪನ್ನಗಳಿಗೆ ನಿಷೇಧವಿದೆ ನಿಜ, ಆದರೆ ಕೊರೊನಾ ಸೋಂಕಿನಿಂದ ಪರಾಗಲು ಆರೋಗ್ಯದ ದೃಷ್ಟಿಯಿಂದ, ಚಿಕಿತ್ಸೆಯ ದೃಷ್ಟಿಯಿಂದ ಲಸಿಕೆ ಸ್ವೀಕರಿಸಬಹುದು ಯುಎಇ ಇಸ್ಲಾಮ್ ಪ್ರಾಧಿಕಾರದ ಅಧ್ಯಕ್ಷ ಶೇಕ್ ಅಬ್ದುಲ್ಲಾ ತಿಳಿಸಿದ್ದಾರೆ.

ಇನ್ನೊಂದೆಡೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಈ ಬಗ್ಗೆ ಹೇಳಿಕೆ ನೀಡಿದ್ದು, ಕೊರೊನಾ ಲಸಿಕೆಗಳಲ್ಲಿ ದನದ ರಕ್ತವನ್ನು ಬಳಸುವ ಬಗ್ಗೆ ಮಾಹಿತಿ ಇದೆ. ಹಾಗಾಗಿ ಇದು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ. ಗೋಮೂತ್ರದಿಂದ ಅಥವಾ ಗೋವಿನ ಸೆಗಣಿಯಿಂದ ಲಸಿಕೆ ತಯಾರಿಸಿದರೆ ಅದನ್ನು ಹಿಂದೂಗಳು ಬಳಸಬಹುದು ಗೋಮಾತೆಯ ರಕ್ತದಿಂದ ತಯಾರಾದ ಲಸಿಕೆಗೆ ಭಾರತದಲ್ಲಿ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ