ಅರೆಸ್ಟ್: ರೈಲಲ್ಲಿ 750 ಜೀವಂತ ಗುಂಡುಗಳನ್ನು ಸಾಗಿಸುತ್ತಿದ್ದ ಯುವತಿಯ ಬಂಧನ

750 ಜೀವಂತ ಗುಂಡುಗಳನ್ನು ಸಾಗಿಸುತ್ತಿದ್ದ 20 ವರ್ಷದ ಯುವತಿಯನ್ನು ಉತ್ತರ ಪ್ರದೇಶದ ಬಲಿಯಾ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಈ ಯುವತಿಯು ರೈಲು ಸಂಖ್ಯೆ 05446 ರಲ್ಲಿ ಪ್ರಯಾಣಿಸುತ್ತಿದ್ದಳು.ಬ್ದೊಡ್ಡ ಪ್ರಮಾಣದಲ್ಲಿ ಕಾರ್ಟ್ರಿಜ್ಗಳನ್ನು ಹೊಂದಿದ್ದಳು ಎಂದು ಪೊಲೀಸರಿಗೆ ಸುಳಿವು ದೊರೆತಿದೆ ಎಂದು ಗೋರಖ್ಪುರ ಶ್ರೇಣಿ ಜಿಆರ್ ಪಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸಾವಿ ರತ್ನ ಗೌತಮ ತಿಳಿಸಿದ್ದಾರೆ. ರೈಲು ಬಿಹಾರದ ಛಾಪ್ರಾಗೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
“ಯುವತಿಯೊಬ್ಬಳು ರೈಲಿನ ಸೀಟಿನಲ್ಲಿ ಕುಳಿತಿದ್ದಳು ಮತ್ತು ತನ್ನ ಸೀಟಿನ ಕೆಳಗೆ ಟ್ರಾಲಿ ಚೀಲವನ್ನು ಇಟ್ಟುಕೊಂಡಿದ್ದಳು. ಆ ಟ್ರಾಲಿ ಚೀಲದ ಬಗ್ಗೆ ಪ್ರಶ್ನಿಸಿದಾಗ ಆಕೆ ಗೊಂದಲದ ಉತ್ತರ ನೀಡಿದಳು. ಚೀಲವನ್ನು ಶೋಧಿಸಿದಾಗ ಅದರಲ್ಲಿ 750 ಜೀವಂತ ಕಾರ್ಟ್ರಿಜ್ಗಳು ಕಂಡುಬಂದಿವೆ “ಎಂದು ಡಿಎಸ್ಪಿ ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ಆರೋಪಿತ ಯುವತಿಯು ತಾನು ಗುಂಡುಗಳನ್ನು ಛಾಪ್ರಾಕ್ಕೆ ಕೊಂಡೊಯ್ಯುತ್ತಿದ್ದೆ ಮತ್ತು ಅಲ್ಲಿ ಯಾರಿಗಾದರೂ ಹಸ್ತಾಂತರಿಸಬೇಕಾಗಿತ್ತು ಎಂದು ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಚೀಲವನ್ನು ಘಾಜಿಪುರ ಜಿಲ್ಲೆಯ ಕರಿಮೂದ್ದೀನ್ಪುರ ಪೊಲೀಸ್ ಠಾಣೆಯ ನಿವಾಸಿ ಅಂಕಿತ್ ಪಾಂಡೆ ತನಗೆ ನೀಡಿದ್ದಾನೆ ಎಂದು ವಿಚಾರಣೆ ವೇಳೆ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ನಾದಿಹಾರ್ ಗ್ರಾಮದ ನಿವಾಸಿ ಮನಿತಾ ಸಿಂಗ್ ಎಂದು ಗುರುತಿಸಲಾದ ಮಹಿಳೆಯನ್ನು ಬಲ್ಲಿಯಾದ ಜಿಆರ್ಪಿ ಉಸ್ತುವಾರಿ ಸುಭಾಷ್ ಚಂದ್ರ ಯಾದವ್ ತಿಳಿಸಿದ್ದಾರೆ.
“ಯುವತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಕಳುಹಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಟ್ರಿಜ್ಗಳನ್ನು ನಕ್ಸಲೀಯರಿಗೆ ಮಾರಾಟ ಮಾಡಿರಬಹುದು ಎಂದು ಆರೋಪಿಸಲಾಗಿದೆ “ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಂಕಿತ್ ಪಾಂಡೆಗಾಗಿ ಹುಡುಕಾಟವೂ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth