ಈಶ್ವರ್ ಮಲ್ಪೆ ಅವರಿಗೆ ಉತ್ತರ ಕನ್ನಡ ಜಿಲ್ಲಾಡಳಿತ ಅವಮಾನಿಸಿ ಕಳಿಸಿರುವುದು ಎಷ್ಟು ಸರಿ? - Mahanayaka

ಈಶ್ವರ್ ಮಲ್ಪೆ ಅವರಿಗೆ ಉತ್ತರ ಕನ್ನಡ ಜಿಲ್ಲಾಡಳಿತ ಅವಮಾನಿಸಿ ಕಳಿಸಿರುವುದು ಎಷ್ಟು ಸರಿ?

sathish budumakki
28/09/2024

  • ಸತೀಶ್ ಬೂಡುಮಕ್ಕಿ, ಸುಳ್ಯ

ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಮೃತ ದೇಹ ಹುಡುಕಾಟದಲ್ಲಿ  ಸಮಾಜ ಸೇವಕರು, ಈಜುಗಾರರಾದ ಈಶ್ವರ್ ಮಲ್ಪೆ ಮತ್ತು ಅವರ ತಂಡ  ನಿಸ್ವಾರ್ಥ ಸೇವೆಯಾಗಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಂಡವರು. ಆದರೆ ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದಾಗ  ಈಶ್ವರ್ ಮಲ್ಪೆ ಅವರಿಗೆ ಅವಮಾನಿಸಿ ಕಳುಹಿಸಿರುವುದು ಖಂಡನೀಯ.

ನದಿಯಲ್ಲಿ ಬಹಳಷ್ಟು ದಿನಗಳ ನಂತರ ಮತ್ತೆ ಪ್ರಾರಂಭಗೊಂಡ ಹುಡುಕಾಟದ ಈ ಕಾರ್ಯಾಚರಣೆಯಲ್ಲಿ  ಕೇರಳದ ಅರ್ಜುನ್ ಅವರ ಮೃತದೇಹ ಹಾಗೂ ಟ್ಯಾಂಕರ್ ಪತ್ತೆಯಾಗಿರುವುದಕ್ಕೆ ಈಶ್ವರ್ ಮಲ್ಪೆ ಅವರಿಗೆ ಮೊದಲು ಧನ್ಯವಾದಗಳ ಸಲ್ಲಿಸುತ್ತೇನೆ. ಪ್ರತಿಯೊಬ್ಬರಿಗೂ ಈಶ್ವರ್ ಮಲ್ಪೆ ಅವರ ಕೆಲಸಕಾರ್ಯದ ಬಗ್ಗೆ ತಿಳಿದಿದೆ. ಅಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸರ್ಕಾರ, ಇತರ ಎಲ್ಲರ ಸೇವೆಯಲ್ಲೂ ಗೌರವಿದೆ. ಆದರೆ ಈಶ್ವರ್ ಮಲ್ಪೆ  ಅವರಿಂದ ಎಲ್ಲಾ ರೀತಿಯ ಉಪಕಾರ ಪಡೆದು ಫಲಿತಾಂಶದ ಸಂದರ್ಭದಲ್ಲಿ ಆಡಳಿತ ಮತ್ತು ಅಧಿಕಾರಸ್ಥರು ಲಾಭವನ್ನು ಪಡೆಯುವ ಯೋಚನೆಯಿಂದ ಉತ್ತರ ಕನ್ನಡ ಜಿಲ್ಲಾಡಳಿತವು ನದಿಯಲ್ಲಿ ಮಹತ್ವದ ಸುಳಿವು ಸಿಗುತ್ತಿದ್ದಂತೆ ಈಶ್ವರ್ ಮಲ್ಪೆ ಅವರನ್ನ ನಿರ್ಲಕ್ಷ್ಯವಾಗಿ ನಡೆಸಿಕೊಂಡು ತೆರೆಮರೆಗೆ ಸರಿಸಿ, ಕಣ್ಣೀರು ಹಾಕುವಂತೆ ಮಾಡಿ ಊರಿಗೆ ಕಳಿಸಿರುವ ಘಟನೆಯು ನಮ್ಮ ರಾಜ್ಯದ ಮೌಲ್ಯಯುತ ಆಸ್ತಿಯಂತಿರುವ ಈಶ್ವರ್ ಮಲ್ಪೆ ಅವರಿಗೆ ಮಾಡಿದ ಅಗೌರವ ಮಾತ್ರವಲ್ಲ ಇಡೀ ರಾಜ್ಯದ ಜನತೆಗೆ ಮಾಡಿದ ನೋವಾಗಿದೆ ಇದು ಸರಿಯಲ್ಲ.

ಅಲ್ಲಿನ ಶಾಸಕರಾದ ಸತೀಶ್ ಶೈಲ್ ಅವರ ಮುತುವರ್ಜಿಯಲ್ಲಿ ಕೆಲಸ ಕಾರ್ಯ ನೋಡಿದಾಗ ಹೆಮ್ಮೆ ಎನಿಸುತ್ತಿತ್ತು ಆದರೆ ಈಶ್ವರ್ ಮಲ್ಪೆ ಅವರ ವಿಷಯದಲ್ಲಿ ಅವರು ತೆಗೆದುಕೊಂಡ ನಿರ್ಧಾರ ಅಸಮಾಧಾನಕರವಾಗಿದೆ. ಈ ರೀತಿಯಲ್ಲಿ  ಸಮಾಜಸೇವಕರ ಧೈರ್ಯ, ಮನಸ್ಸನ್ನ ಕುಗ್ಗಿಸುವ ಕೆಲಸ ಯಾರಿಗೂ ಒಳ್ಳೆಯದಲ್ಲ.

ಅಲ್ಲಿನ ಜಿಲ್ಲಾಡಳಿತ ಈ ಬಗ್ಗೆ  ಕ್ಷಮಯಾಚಿಸಲಿ. ಜಿಲ್ಲಾಡಳಿತದ ಈ ತಪ್ಪು ನಿರ್ಧಾರದಿಂದ ಅಲ್ಲಿನ ಕೆಲಸಕಾರ್ಯಗಳ ಬಗ್ಗೆ ಇದ್ದ ಗೌರವವು ಜನಗಳಲ್ಲಿ ಕಳೆದುಕೊಳ್ಳಲು ಕಾರಣವಾಗಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ತಮ್ಮ ಸ್ಥಾನದಿಂದಲೇ ಈಶ್ವರ್ ಮಲ್ಪೆ ಅವರಿಗೆ ಕರೆದು ಗೌರವ ಸನ್ಮಾನ ಸಲ್ಲಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಗಮನಕ್ಕೆ ತಂದು ಆಗ್ರಹಿಸುತ್ತೇನೆ. ಈ ಘಟನೆಯಿಂದ ಬಹಳಷ್ಟು ನೋವಾಗಿದೆ. ಪ್ರಕೃತಿ ದುರಂತಗಳು ಉತ್ತರ ಕನ್ನಡ ಜಿಲ್ಲೆಯ ದುರಂತದಲ್ಲೇ ಮುಗಿದೊಯಿತು ಎನ್ನಲಾಗುವುದಿಲ್ಲ. ಈಶ್ವರ್ ಮಲ್ಪೆ ಅವರಂತಹವರು ಈ ರಾಜ್ಯದಲ್ಲಿ ಇನ್ನಷ್ಟು ಬೆಳೆದು ಬರಬೇಕು. ಯಾವುದೇ  ಸರ್ಕಾರವಾಗಲಿ ಇಂತಹವರ ಬೆಳೆಸಿ ಉಳಿಸುವ ಕೆಲಸ ಮಾಡಬೇಕಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ