ಕರಾವಳಿಯ ಭದ್ರತೆಗೆ ಸವಾಲೊಡ್ಡುವ ಭಯೋತ್ಫಾದಕತೆಯ ವಿರುದ್ಧ ವಿಎಚ್ ಪಿ ಜನಜಾಗೃತಿ ಅಭಿಯಾನ - Mahanayaka

ಕರಾವಳಿಯ ಭದ್ರತೆಗೆ ಸವಾಲೊಡ್ಡುವ ಭಯೋತ್ಫಾದಕತೆಯ ವಿರುದ್ಧ ವಿಎಚ್ ಪಿ ಜನಜಾಗೃತಿ ಅಭಿಯಾನ

vhp
26/11/2022

ಕಳೆದ ಹಲವು ವರ್ಷಗಳಿಂದ ಮಂಗಳೂರು ಸೇರಿದಂತೆ ಕರಾವಳಿಯನ್ನು ಭಯೋತ್ಪಾದಕತೆಯ ಮುಖಾಂತರ ಇಸ್ಲಾಮಿಕ್ ಸಾಮ್ರಾಜ್ಯ ನಿರ್ಮಾಣ ಮಾಡಲು ಪ್ರಯತ್ನಿಸಲಾಗ್ತಿದೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಡ್ರಗ್ಸ್ ಜಿಹಾದ್, ಸೆಕ್ಸ್ ಜಿಹಾದ್, ಗೋ ಮಾಫಿಯಾ ಇವೆಲ್ಲವೂ ಭಯೋತ್ಪಾದಕತೆಯ ಒಂದೊಂದು ಮುಖಗಳು, ಈ ಕೃತ್ಯಗಳ ಮುಖಾಂತರ ಹಿಂದುಗಳನ್ನು ಮತ್ತು ಹಿಂದೂ ಶ್ರದ್ಧಾ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು, ನಮ್ಮ ಭಾಗದ ಭದ್ರತೆಗೆ ಸವಾಲೊಡ್ಡುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.

ಕರಾವಳಿಯ ಪ್ರಮುಖ ಭಾಗಗಳಲ್ಲಿ ಈಗಾಗಲೇ ಉಗ್ರರು ಸ್ಲೀಪರ್ ಸೆಲ್ ಮುಖಾಂತರ ಸಕ್ರೀಯವಾಗಿದ್ದು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಬಾರಿ ಸಂಚು ರೂಪಿಸುತ್ತಿದ್ದಾರೆ, ಇದೀಗ ನಗರದಲ್ಲಿ ಆಟೋದಲ್ಲಿ ಬಾಂಬ್ ಸ್ಫೋಟಿಸುವ ಮೂಲಕ ಕರಾವಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಈ ರೀತಿಯ ದೇಶ ವಿರೋಧಿ ಕೃತ್ಯದ ವಿರುದ್ಧ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ. ಸವಾಲುಗಳನ್ನು ಎದುರಿಸಿ ಎದ್ದು ನಿಲ್ಲಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ನಮ್ಮ ಯುವ ಸಂಘಟನೆಗಳಾದ ಬಜರಂಗದಳ ಮತ್ತು ದುರ್ಗಾವಾಹಿನಿ ಮುಖಾಂತರ ನವೆಂಬರ್ 28 ರ ಸೋಮವಾರದಂದು ಭಿತ್ತಿಪತ್ರ ಪ್ರದರ್ಶಿಸುವ ಮುಖಾಂತರ ” ಜನಜಾಗೃತಿ ಸಭೆಯನ್ನು ಮಂಗಳೂರು ನಗರದ ಪ್ರಮುಖ 7 ಜಂಕ್ಷನ್ ಗಳಾದ ಜ್ಯೋತಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ತೊಕ್ಕೊಟ್ಟು ಜಂಕ್ಷನ್, ಉರ್ವಸ್ಟೋರ್ ಜಂಕ್ಷನ್, ಕಾವೂರು ಜಂಕ್ಷನ್, ಮೂಡಬಿದ್ರೆ ಜಂಕ್ಷನ್, ಸುರತ್ಕಲ್ ಮತ್ತು ಗುರುಪುರದಲ್ಲಿ ನಡೆಯಲಿದೆ ಎಂದರು.

ಭಯೋತ್ಪಾದಕರು ಕರಾವಳಿಯನ್ನು ಉಗ್ರರ ಪ್ರಯೋಗ ಶಾಲೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ, 2008ರಲ್ಲಿ ಉಳ್ಳಾಲದ ಮುಕ್ಕಚೇರಿ ಹಾಗೂ ಚೆಂಬುಗುಡ್ಡೆಯಲ್ಲಿ 5 ಮಂದಿ ಶಂಕಿತ ಉಗ್ರರ ಬಂಧನ, 2013ರಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕ ಬಂಧಿತ ಯಾಸಿನ್ ಭಟ್ಕಳ್ ಮತ್ತು ಆತನ ಸಹೋದರ ರಿಯಾಜ್ ಭಟ್ಕಳ್ ಹಾಗೂ ಸಹಚರರ ಬಂಧನ, 2013ರಲ್ಲಿ ಉಗ್ರರ ಜತೆ ನಂಟು ಹೊಂದಿದ್ದ ಆರೋಪದಲ್ಲಿ ಮಂಗಳೂರು ಪಂಜಿಮೊಗರಿನ ಆಯಿಷಾ ಹಾಗೂ ಆಕೆಯ ಪತಿ ಜುಬೇರ್ನನ ಬಂಧನ, 2015ರಲ್ಲಿ ಮಂಗಳೂರಿನಿಂದ ದುಬೈಗೆ ಪ್ರಯಾಣಿಸಲು ಬಂದಿದ್ದ ಭಟ್ಕಳದ ಶಂಕಿತ ಉಗ್ರ ರಿಯಾಸ್ ಸಯ್ಯದ್ಧಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು, 2019ರಲ್ಲಿ ಐಸಿಸ್ ಶಂಕಿತ ಉಗ್ರರ ತಂಡ ಶ್ರೀಲಂಕಾದಿಂದ ಕೇರಳ ಕರಾವಳಿಯತ್ತ ಬರುತ್ತಿರುವ ಗುಪ್ತಚರ ವರದಿ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕಾರವಾರದ ತನಕ ಕರಾವಳಿ ಕಾವಲು ಪೊಲೀಸ್ ಪಡೆ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದರು ಎಂದರು.

2021 ರಲ್ಲಿ ನಡೆದ ಉಳ್ಳಾಲದ ಮಾಜಿ ಕಾಂಗ್ರೆಸ್ ಶಾಸಕ ಇದಿನಬ್ಬರವರ ಮೊಮ್ಮಗ ಹಿಂದೂ ಯುವತಿಯನ್ನು ಇಸ್ಲಾಮಿಗೆ ಮತಾಂತರ ಮಾಡುವುದರೊಂದಿಗೆ ಸಿರಿಯಾದ ಐಸಿಸ್ ಭಯೋತ್ಪಾದಕ ಸಂಘಟನೆಯ ಜೊತೆಗೆ ಸಂಪರ್ಕ – NIA ಅಧಿಕಾರಿಗಳು ಯುವತಿಯನ್ನು ಬಂಧಿಸಿದ್ದರು, ಇದೀಗ ನಮ್ಮ ಶೃದ್ಧಾ ಕೇಂದ್ರ ಕದ್ರಿ ದೇವಸ್ಥಾನವನ್ನು ದ್ವಂಸ ಮಾಡಲು ಸಂಚು. ಈ ಭಯೋತ್ಪಾದಕ ಕೃತ್ಯದ ವಿರುದ್ಧ ಜನತೆ ಜಾಗೃತಿಯಾಗಬೇಕಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ನ ಮುಖಂಡರು ಆಗ್ರಹಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ