ಪಾಕಿಸ್ತಾನ ಸೇನೆಯ ವಿರುದ್ಧ ಭಾರತೀಯ ಸೈನ್ಯದ ಗೆಲುವಿನ ಸ್ಮರಣಾರ್ಥ ಡಿ.16ರಂದು ವಿಜಯ ದಿವಸ’
ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಭಾರತೀಯ ಸೈನ್ಯವು ಪಾಕಿಸ್ತಾನ ಸೇನೆಯ ವಿರುದ್ಧ ಸಾಧಿಸಿದ ಐತಿಹಾಸಿಕ ಗೆಲುವಿನ ಸ್ಮರಣಾರ್ಥ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘವು 51ನೇ ವರ್ಷದ ‘ವಿಜಯ ದಿವಸ’ ಕಾರ್ಯಕ್ರಮವನ್ನು ಇದೇ 16ರಂದು ಬೆಳಿಗ್ಗೆ 8:30ಕ್ಕೆ ಮಂಗಳೂರು ಕದ್ರಿ ಪಾರ್ಕ್ ಬಳಿಯ‘ಯುದ್ಧ ಸ್ಮಾರಕ’ದಲ್ಲಿಏರ್ಪಡಿಸಿದೆ.
ಈ ಕುರಿತು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಕಾರ್ಯಕ್ರಮ ಸಂಘಟನಾ ಸಮಿತಿ ಅಧ್ಯಕ್ಷ ಕರ್ನಲ್ ಎನ್.ಎಸ್.ಭಂಡಾರಿ, ‘ಭಾರತವು ಪಾಕಿಸ್ತಾನದ ವಿರುದ್ಧ 1971ರ ಡಿ.3ರಿಂದ ‘ಆಪರೇಷನ್ ಚೆಂಗಿಸ್ ಖಾನ್’ ಹೆಸರಿನ ಕಾರ್ಯಾಚರಣೆ ಆರಂಭಿಸಿತ್ತು.
ದೇಶದ ಪಶ್ಚಿಮ ಗಡಿ ಹಾಗೂ ಪೂರ್ವ ಗಡಿಗಳಲ್ಲಿ ಏಕಕಾಲದಲ್ಲಿ ಯುದ್ಧ ನಡೆದಿತ್ತು. 13 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಭಾರತೀಯ ಸೇನೆಯ 1,426 ಸೈನಿಕರು ಹುತಾತ್ಮರಾಗಿದ್ದಾರೆ. 3,611 ಸೈನಿಕರು ಗಾಯಾಳುಗಳಾಗಿದ್ದಾರೆ. ಪ್ರತಿಯಾಗಿ ಪಾಕಿಸ್ತಾನದ 4ಸಾವಿರಕ್ಕೂ ಅಧೀಕ ಸೈನಿಕರು ಹತರಾಗಿದ್ದು, 6ಸಾವಿರಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ. ಪಾಕಿಸ್ತಾನದ 56,694 ಸೈನಿಕರು, 12,192 ಪೊಲೀಸರು ಹಾಗೂ 24,114 ನಾಗರಿಕರು ಭಾರತದ ಸೇನೆಯ ಎದುರು ಶರಣಾಗತರಾಗಿದ್ದರು’ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka