ಪೈಂಟಿಂಗ್ ಮಾಡುತ್ತಿದ್ದ ವೇಳೆ ಏಣಿ ಜಾರಿ ಬಿದ್ದು ಕಾರ್ಮಿಕ ಸಾವು - Mahanayaka

ಪೈಂಟಿಂಗ್ ಮಾಡುತ್ತಿದ್ದ ವೇಳೆ ಏಣಿ ಜಾರಿ ಬಿದ್ದು ಕಾರ್ಮಿಕ ಸಾವು

mohitha
26/02/2024

ಮಂಗಳೂರು: ಪೈಂಟಿಂಗ್ ಮಾಡುತ್ತಿದ್ದ ವೇಳೆ ಏಣಿಯಿಂದ ಬಿದ್ದು ಕಾರ್ಮಿಕರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ನಡೆದಿದೆ.

ಕುಡುಪು ಕೊಂಚಾಡಿ ನಿವಾಸಿ ಮೋಹಿತ್ ಪೂಜಾರಿ(26) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರು ಮಂಗಳೂರಿನ ಶಿವ ಎಂಡ್ ಡೆಕೋರೇಟರ್ಸ್ ಮಾಲಿಕರ ಮನೆಯಲ್ಲಿ 15 ದಿನಗಳಿಂದ ಪೈಂಟಿಂಗ್ ಕೆಲಸ ಮಾಡುತ್ತಿದ್ದರು. 24ರಂದು 2ನೇ ಮಹಡಿಗೆ ಪೈಂಟ್ ಮಾಡುತ್ತಿದ್ದ ವೇಳೆ ಏಕಾಏಕಿ ಏಣಿ ಜಾರಿ ಬಿದ್ದಿದ್ದು, ಪರಿಣಾಮವಾಗಿ ಮೋಹಿತ್ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು.

ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತು. ಆದ್ರೆ ಆಸ್ಪತ್ರೆಗೆ ತಲುಪುವ ಮೊದಲೇ ಅವರು ಕೊನೆಯುಸಿರೆಳೆದಿದ್ದರು. ಘಟನೆ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ