ಬೆಳ್ಳಂ ಬೆಳಗ್ಗೆ ಒಂಟಿ ಸಲಗ ಸಿಟಿ ರೌಂಡ್ಸ್: ಅಡ್ಡಾದಿಡ್ಡಿ ಓಡಾಡಿದ ಒಂಟಿ ಸಲಗ

29/09/2024
ಚಿಕ್ಕಮಗಳೂರು: ಬೆಳ್ಳಂಬೆಳಗ್ಗೆ ಒಂಟಿ ಸಲಗ ಸಿಟಿ ರೌಂಡ್ಸ್ ಹಾಕಿದ್ದು, ಮಲೆನಾಡಲ್ಲಿ ನಿಲ್ಲದ ಒಂಟಿ ಸಲಗದ ಹಾವಳಿಯಿಂದ ಜನ ಕಂಗಾಲಾಗಿದ್ದಾರೆ.
ಮೂಡಿಗೆರೆ ಪಟ್ಟಣದ ರಸ್ತೆಯಲ್ಲಿ ಒಂಟಿ ಸಲಗ ವಾಕ್ ಮಾಡಿದ್ದು, ಬೆಳಗಿನ ಜಾವ ಪಟ್ಟಣದಲ್ಲಿ ಒಂಟಿ ಸಲಗ ಅಡ್ಡಾದಿಡ್ಡಿ ಓಡಾಟ ನಡೆಸಿದೆ.
ಒಂಟಿ ಸಲಗದ ರೌಂಡ್ಸ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೂಡಿಗೆರೆ ಪಟ್ಟಣದ ಸಂತೇ ಮೈದಾನ, ಪಟ್ಟಣ ಪಂಚಾಯಿತಿ ರಸ್ತೆ, ಹೊಯ್ಸಳ ಕ್ರೀಡಾಂಗಣದ ಪಕ್ಕದಲ್ಲಿ ಒಂಟಿ ಸಲಗ ವಾಕ್ ಮಾಡಿದೆ.
ಒಂಟಿ ಸಲಗವನ್ನು ಕಾಡಿಗಟ್ಟುವ ನಿಟ್ಟಿನಲ್ಲಿ ಕಾರ್ಯಾರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ, ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ಕೂಡ ನೀಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj