ಶೀಘ್ರದಲ್ಲೇ ಮತ್ತೊಬ್ಬ ನಕ್ಸಲ್ ರವಿ ಕೋಟೆಹೊಂಡ ಶರಣಾಗತಿ?
ಬೆಂಗಳೂರು: ಮುಂಡಗಾರು ಲತಾ ತಂಡದಿಂದ ಬೇರ್ಪಟ್ಟಿದ್ದ ನಕ್ಸಲ್ ರವಿ ಕೋಟೆಹೊಂಡ ಅಲಿಯಾಸ್ ರವೀಂದ್ರ ಕೂಡ ಶೀಘ್ರವೇ ಶರಣಾಗಲಿದ್ದಾರೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ತೆರೆಮರೆಯಲ್ಲಿ ಪ್ರಕ್ರಿಯೆ ಆರಂಭಗೊಂಡಿದೆ ಎನ್ನಲಾಗಿದೆ.
ವಿಕ್ರಮ್ ಗೌಡ ಎನ್ ಕೌಂಟರ್ ಬಳಿಕ ಕಬಿನಿ ತಂಡ ಎರಡು ಭಾಗವಾಗಿ ಚದುರಿತ್ತು. ಪೊಲೀಸರ ಕೈಗೆ ಸಿಗಬಾರದು ಎನ್ನುವ ತಂತ್ರಗಾರಿಕೆಯ ನಿಟ್ಟಿನಲ್ಲಿ ಸಣ್ಣ ತಂಡಗಳಾಗಿ ಬೇರ್ಪಟ್ಟಿತ್ತು ಎನ್ನಲಾಗಿದೆ. ಕೆಲವು ದಿನಗಳ ನಂತರ ಎಲ್ಲರೂ ನಿರ್ದಿಷ್ಟ ಜಾಗದಲ್ಲಿ ಸಂಧಿಸಿದ್ದರು. ಆದರೆ ರವಿ ಬೇರ್ಪಟ್ಟಿದ್ದರು ಎನ್ನಲಾಗಿದೆ.
ರವಿ ಕೂಡ ಪೊಲೀಸರಿಗೆ ಶರಣಾದರೆ ಕರ್ನಾಟಕ ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾದಂತಾಗುತ್ತದೆ. ಎಲ್ಲ ನಕ್ಸಲರು ಮುಖ್ಯವಾಹಿನಿಗೆ ಬಂದು ಸಂವಿಧಾನ ಬದ್ಧವಾಗಿ ತಮ್ಮ ಹೋರಾಟಗಳನ್ನು ನಡೆಸಲಿದ್ದಾರೆ.
ಶರಣಾಗಿರುವ ನಕ್ಸಲರನ್ನು ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರಲ್ಲಿರುವ ಶಾಸ್ತ್ರಾಸ್ತ್ರಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನ್ಯಾಯಾಂಗ ಬಂಧನದಲ್ಲಿರುವ ನಕ್ಸಲರನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದುಕೊಂಡು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: