ರಾಜಕೀಯಕ್ಕೆ ಪ್ರವೇಶಿಸುತ್ತಾರಾ ತಮಿಳುನಾಡು ಸಿಎಂ ಗೆಳತಿ, ನಟಿ ತ್ರಿಷಾ! - Mahanayaka

ರಾಜಕೀಯಕ್ಕೆ ಪ್ರವೇಶಿಸುತ್ತಾರಾ ತಮಿಳುನಾಡು ಸಿಎಂ ಗೆಳತಿ, ನಟಿ ತ್ರಿಷಾ!

trisha
26/10/2026

ಚೆನ್ನೈ: ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರ ಕೊಯಮತ್ತೂರು ಭೇಟಿ ತಮಿಳುನಾಡಿನಲ್ಲಿ ದೊಡ್ಡ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಖಾಸಗಿ ಮೊಬೈಲ್ ಶೋರೂಮ್ ಉದ್ಘಾಟನೆಗೆ ಆಗಮಿಸಿದ್ದ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ನೆರೆದಿದ್ದರು. ತೆರೆದ ವಾಹನದಲ್ಲಿ ನಿಂತು ಜನರಿಗೆ ಕೈಬೀಸಿದ ತ್ರಿಷಾ ಅವರ ಈ ಬೃಹತ್ ರೋಡ್ ಶೋ ನಟಿಯ ಜನಪ್ರಿಯತೆಯನ್ನು ಮರುಸಾಬೀತುಪಡಿಸಿದೆ.

ಈ ಜನಸ್ತೋಮವನ್ನು ಕಂಡ ದಳಪತಿ ವಿಜಯ್ ಅವರ ‘ಟಿವಿಕೆ’ (ತಮಿಳಗ ವೆಟ್ರಿ ಕಳಗಂ) ಬೆಂಬಲಿಗರು ಮತ್ತು ಅಭಿಮಾನಿಗಳು ತ್ರಿಷಾ ರಾಜಕೀಯ ರಂಗಕ್ಕೆ ಪ್ರವೇಶಿಸಬೇಕೆಂದು ಬಹಿರಂಗವಾಗಿ ಬಯಸುತ್ತಿದ್ದಾರೆ. ಕಾರ್ಯಕ್ರಮದ ಬಳಿಕ ಸುದ್ದಿಗಾರರು ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನಿಸಿದಾಗ, ತ್ರಿಷಾ ಯಾವುದೇ ನೇರ ಉತ್ತರ ನೀಡದೆ ಕೇವಲ ಮುಗುಳುನಗುತ್ತಾ ಮುನ್ನಡೆದರು.

ಈ ಕಾರ್ಯಕ್ರಮವು ಯಾವುದೇ ಅಧಿಕೃತ ರಾಜಕೀಯ ವೇದಿಕೆಯಾಗಿರಲಿಲ್ಲ ಮತ್ತು ನಟಿ ಕೂಡ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಆದಾಗ್ಯೂ, ಬೆಳ್ಳಿಪರದೆಯ ಯಶಸ್ಸಿನ ಬಳಿಕ ಅವರು ರಾಜಕೀಯಕ್ಕೆ ಕಾಲಿಡಲಿದ್ದಾರೆಯೇ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಅವರ ಮುಂದಿನ ಹೆಜ್ಜೆ ಎಲ್ಲರಲ್ಲೂ ತೀವ್ರ ಕುತೂಹಲ ಮೂಡಿಸಿದೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler