ಬೆಂಗಳೂರಿನಲ್ಲಿ ನಡೆಯಿತು ಭೀಕರ ಘಟನೆ: ಯುವತಿಯನ್ನು ಹತ್ಯೆ ಮಾಡಿ, ಕತ್ತರಿಸಿ ಫ್ರಿಜ್ ನಲ್ಲಿಟ್ಟ! - Mahanayaka

ಬೆಂಗಳೂರಿನಲ್ಲಿ ನಡೆಯಿತು ಭೀಕರ ಘಟನೆ: ಯುವತಿಯನ್ನು ಹತ್ಯೆ ಮಾಡಿ, ಕತ್ತರಿಸಿ ಫ್ರಿಜ್ ನಲ್ಲಿಟ್ಟ!

mahalakshmi case bengalore
21/09/2024

ಬೆಂಗಳೂರು: ದೆಹಲಿಯಲ್ಲಿ ನಡೆದ ಶ್ರದ್ಧಾ ಕೇಸ್ ಮಾದರಿಯಲ್ಲೇ ಬೆಂಗಳೂರಿನಲ್ಲೊಂದು ಭೀಕರ ಘಟನೆ ಬೆಳಕಿಗೆ ಬಂದಿದ್ದು, ಯುವತಿಯನ್ನು ಹತ್ಯೆ ಮಾಡಿ ದೇಹವನ್ನು ಕತ್ತರಿಸಿ ಫ್ರೀಡ್ಜ್ ನಲ್ಲಿ ಇಟ್ಟಿರುವುದು ಪತ್ತೆಯಾಗಿದೆ.

ಬೆಂಗಳೂರಿನ ವೈಯಾಲಿಕಾವಲ್ ನ ಮುನೇಶ್ವರ ಬ್ಲಾಕ್ ನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಯುವತಿಯ ಮೃತದೇಹವನ್ನ ಸುಮಾರು 30—35 ತುಂಡಾಗಿ ಕತ್ತರಿಸಿ ಫ್ರೀಡ್ಜ್ ನಲ್ಲಿ ಇರಿಸಲಾಗಿದೆ.

ಕಳೆದ ಎರಡು ದಿನಗಳಿಂದ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಹೀಗಾಗಿ ಅದೇ ಬಿಲ್ಡಿಂಗ್ ನ ಅಕ್ಕಪಕ್ಕದವರು ಇವತ್ತು ಸಂಬಂಧಿಕರಿಗೆ ಹೇಳಿದ್ದಾರಂತೆ. ಅದರಂತೆ ಯುವತಿಯ ತಾಯಿ ಮತ್ತು ಅಕ್ಕ ಮನೆಯ ಬಳಿ ಬಂದು ಬೀಗ ಒಡೆದು ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

165 ಲೀಟರ್ಸ್ ಫ್ರೀಡ್ಸ್ ನಲ್ಲಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿಡಲಾಗಿದೆ. ಮೃತ ಯುವತಿಯನ್ನು ಮಹಾಲಕ್ಷ್ಮೀ ಎಂದು ಗುರುತಿಸಲಾಗಿದೆ. ಈಕೆ ತನ್ನ ಗಂಡನಿಂದ ಬೇರೆಯಾದ ನಂತರ ಪ್ರತ್ಯೇಕವಾಗಿ ಒಬ್ಬಂಟಿಯಾಗಿ ವಾಸವಿದ್ದಳು ಎನ್ನಲಾಗಿದೆ.

ಹತ್ಯೆಗೀಡಾದ ಯುವತಿಯ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಆಕೆ ಹೊರ ರಾಜ್ಯದವಳು ಎಂದು ಹೇಳಲಾಗುತ್ತಿದೆ.  ಕಳೆದ 3 ವರ್ಷಗಳಿಂದಲೂ ವೈಯಾಲಿಕಾವಲ್ ನ ಮುನೇಶ್ವರ ಬ್ಲಾಕ್ ನ 4ನೇ ಕ್ರಾಸ್ ನ ಮನೆಯಲ್ಲಿ ಆಕೆ ವಾಸವಿದ್ದಳು.

ಈಕೆಯ ಗಂಡ ನೆಲಮಂಗಲದಲ್ಲಿ ಇದ್ದಾನೆ ಎಂದು ಹೇಳಲಾಗಿದ್ದು, ಈಕೆಗೆ 4 ವರ್ಷದ ಮಗು ಕೂಡ ಇದೆಯಂತೆ. ಸುಮಾರು 10ರಿಂದ 15 ದಿನಗಳ ಹಿಂದೆಯೇ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಯುವಕನ ಮೇಲೆ ಅನುಮಾನ:

ಮೃತ ಮಹಾಲಕ್ಷ್ಮೀ ಜೊತೆಗೆ ಒಬ್ಬ ನಿರಂತರ ಸಂಪರ್ಕದಲ್ಲಿದ್ದ ಎಂದು ಹೇಳಲಾಗಿದೆ. ಆತನ ಮೇಲೆಯೇ ಇದೀಗ ಅನುಮಾನ ವ್ಯಕ್ತವಾಗಿದೆ. ಕೊಲೆಗೆ ಸಾಕಷ್ಟು ಪ್ಲಾನ್ ಮಾಡಿರುವಂತೆ ಕಾಣುತ್ತಿದ್ದು, ಹತ್ಯೆ ಮಾಡಿ, ಫ್ರೀಡ್ಜ್ ನಲ್ಲಿಟ್ಟರೆ, ಸಾಕಷ್ಟು ದಿನಗಳ ವರೆಗೆ ಬೆಳಕಿಗೆ ಬರಲ್ಲ. ಅಷ್ಟೊತ್ತಿಗೆ ತಲೆಮರೆಸಿಕೊಳ್ಳ ಬಹುದು ಎನ್ನುವುದು ಹಂತಕನ ಪ್ಲಾನ್ ಆಗಿತ್ತೇ? ಎನ್ನುವ ಶಂಕೆ ವ್ಯಕ್ತವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ