ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಕಣ್ಣನ್ನೇ ಕಿತ್ತ ದುಷ್ಕರ್ಮಿಗಳು - Mahanayaka

ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಕಣ್ಣನ್ನೇ ಕಿತ್ತ ದುಷ್ಕರ್ಮಿಗಳು

eye
25/02/2022

ಬೆಂಗಳೂರು: ಯುವತಿಯೊಬ್ಬಳನ್ನು ಪ್ರೀತಿಸಿದ್ದಕ್ಕೆ ದುಷ್ಕರ್ಮಿಗಳು ಯುವಕನ ಕಣ್ಣು ಕಿತ್ತಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಚರಣ್ ಎಂಬ ಯುವಕನ ಎರಡೂ ಕಣ್ಣಿಗೆ ಡ್ರ್ಯಾಗರ್ ಇರಿದು ಕಣ್ಣು ಕೀಳಲಾಗಿದೆ. ಚರಣ್​ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಯುವತಿಯ ತಂದೆ-ತಾಯಿ ಹಾಗೂ ಸಂಬಂಧಿಗಳೇ ಸುಪಾರಿ ಕೊಟ್ಟು ಈ ಕೃತ್ಯ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಜ್ಜಿ ಮನೆಗೆ ತೆರಳಿದ್ದ ಚರಣ್​​​​​​​​​ ಮೇಲೆ ಹಲ್ಲೆ ಮಾಡಿ, ಡ್ರ್ಯಾಗರ್ ಇರಿದು ಕಣ್ಣು ಕೀಳಲಾಗಿದೆ. ಗಣೇಶ, ಸೋಮು, ಚಿಂಟು ಹಾಗೂ ಮನು ಎಂಬವರು ಈ ಕೃತ್ಯ ಎಸಗಿದ್ದು, ಪ್ರೀತಿಸಿದ ಹುಡುಗಿಯನ್ನು ಮತ್ತೆ ನೋಡದಂತೆ ಕಣ್ಣು ಕೀಳುತ್ತೇವೆ ಎಂದು ಅವಾಜ್​ ಹಾಕಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.


ADS

ಈ ಸಂಬಂಧ ಚರಣ್​ ಸಂಬಂಧಿಕರು ಹುಳಿಮಾವು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರು ಐಪಿಸಿ ಸೆಕ್ಷನ್ 506, 323,326,34ರ ಅಡಿ ಮಾತ್ರ ಕೇಸ್​ ದಾಖಲಿಸಿಕೊಂಡಿದ್ದಾರೆ. ಜೀವ ತೆಗೆಯಲು ಬಂದಿದ್ದವರ ಮೇಲೆ ಐಪಿಸಿ 307ರ ಅಡಿ ಹಾಕಿಲ್ಲ. ಹುಳಿಮಾವು ಮತ್ತು ಸಿದ್ದಾಪುರ ಪೊಲೀಸರು ಯುವತಿ ಸಂಬಂಧಿಕರನ್ನು ರಕ್ಷಣೆ ಮಾಡುತ್ತಿದ್ದಾರೆಂದು ಚರಣ್​ ಕಡೆಯವರು ಆರೋಪಿಸಿದ್ದಾರೆ. ದಯವಿಟ್ಟು ನಮಗೆ ರಕ್ಷಣೆ ಮತ್ತು ನ್ಯಾಯ ಕೊಡಿಸಿ ಎಂದು ಯುವಕನ ಅಜ್ಜಿ ಸರೋಜಮ್ಮ ರಾಜ್ಯ ಮಾನವಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದೇಶಕ್ಕಾಗಿ ಈಶ್ವರಪ್ಪ, ಯಡಿಯೂರಪ್ಪ ತ್ಯಾಗ ಮಾಡಲಿ, ಹರ್ಷ ತಾಯಿಗೆ ಬಿಜೆಪಿ ಟಿಕೆಟ್ ನೀಡಲಿ | ಬಿಜೆಪಿ ನಾಯಕರ ತಲೆಕೆಡಿಸಿದ ಅಭಿಯಾನ

ಲಂಚಕ್ಕೆ ಬೇಡಿಕೆ: ಆಯುಷ್​ ಅಧಿಕಾರಿ ಎಸಿಬಿ ಬಲೆಗೆ

ನಾವು ಅವರ ಹತ್ತು ಜನರನ್ನು ಹೊಡೆಯುತ್ತೇವೆ: ರಿಷಿಕುಮಾರ್ ಸ್ವಾಮೀಜಿಯಿಂದ ಮತ್ತೆ ವಿವಾದಾತ್ಮಕ ಹೇಳಿಕೆ

ದೇಶದ ಸಂವಿಧಾನ, ಕಾನೂನು, ಪೊಲೀಸ್ ಠಾಣೆಗೆ ಗೌರವ ಕೊಡಿ: ಪ್ರಮೋದ್ ಮುತಾಲಿಕ್

ರಷ್ಯಾ ದಾಳಿಗೆ ನಾಗರಿಕರು, ಸೈನಿಕರು ಸೇರಿ 137 ಮಂದಿ ಸಾವು: ಉಕ್ರೇನ್​

ಇತ್ತೀಚಿನ ಸುದ್ದಿ