ಕಾಂಗ್ರೆಸ್ ನಾಯಕನ ಪುತ್ರ ಹೃದಯಾಘಾತದಿಂದ ಮೃತ್ಯು - Mahanayaka
10:24 PM Wednesday 11 - September 2024

ಕಾಂಗ್ರೆಸ್ ನಾಯಕನ ಪುತ್ರ ಹೃದಯಾಘಾತದಿಂದ ಮೃತ್ಯು

18/10/2020

ಶಿವಮೊಗ್ಗ: ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಅವರ ಪುತ್ರ ಸುಹಾಸ್ (31) ಭಾನುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮುಂಜಾನೆಯ ವೇಳೆಗೆ ಎದೆ ನೋವು ಕಾಣಿಸಿಕೊಂಡಿದ್ದು, ಬಳಿಕ ಕೆಲವೇ ಕ್ಷಣಗಳಲ್ಲಿ ಅವರು ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಪುತ್ರಶೋಕದಲ್ಲಿರುವ ಪ್ರಸನ್ನ ಕುಮಾರ್ ಅವರ ಮನೆಗೆ ಕಾಂಗ್ರೆಸ್-ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಮುಖಂಡರುಗಳು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಪ್ರಸನ್ನ ಅವರ ಕುಟುಂಬದ ದುಃಖ ಮುಗಿಲು ಮುಟ್ಟಿದೆ.


Provided by

ಇತ್ತೀಚಿನ ಸುದ್ದಿ