ವಿವಿಧ ಪ್ರೋತ್ಸಾಹಧನ ಯೋಜನೆ ಹಾಗೂ ಶಿಷ್ಯವೇತನಕ್ಕೆ ಆನ್‍ಲೈನ್ ಅರ್ಜಿ ಆಹ್ವಾನ
15/10/2020
ಶಿವಮೊಗ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯು ಕಾನೂನು ಪದವೀಧರರ ಶಿಷ್ಯವೇತನ, ಸಾಮೂಹಿ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳುವ ಪ.ಪಂ.ದ ದಂಪತಿಗಳಿಗೆ ಪ್ರೋತ್ಸಾಹಧನ, ಪ.ಪಂ.ದ ಯುವಕ/ಯುವತಿಯರು ಸಮುದಾಯದ ಒಳಗೆ ಅಂತರ್‍ಜಾತಿ ವಿವಾಹವಾದಲ್ಲಿ ಅಂತಹವರಿಗೆ ಪ್ರೋತ್ಸಾಹಧನ. ಪ.ಪಂ. ವಿಧವೆಯರ ಮರು ವಿವಾಹಕ್ಕೆ ಪ್ರೋತ್ಸಾಹಧನ ಹಾಗೂ ಪ.ಪಂ.ದವರು ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಧನ ಪಡೆಯಲು ಇಲಾಖೆಯ ವೆಬ್‍ಸೈಟ್ www.tw.kar.nic.in ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಇನ್ನು ಮುಂದೇ ಆನ್‍ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಿ, ಹಾರ್ಡ್ ಪ್ರತಿಯನ್ನು ಕಚೇರಿಯಲ್ಲಿ ಸಲ್ಲಿಸುವಂತೆ ಜಿಲ್ಲಾ ಸಮಾಜ ಕಲ್ಯಾಣಾ ಇಲಾಖೆಯ ಸಹಾಯನಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಶಿವಮೊಗ್ಗ, ದೂ.ಸಂ.: 08182-279222 /9482762350 ಗಳನ್ನು ಸಂಪರ್ಕಿಸುವುದು.