10, 20 ಕೊಟ್ರೆ ಮುಟ್ಟಲ್ಲ, ಕೊಟ್ರೆ... 100, 200 ರೂಪಾಯಿಯನ್ನೇ ಕೊಡ್ಬೇಕು: ಹಣ ಕಲೆಕ್ಷನ್ ಗೆ ಇಳಿದ ಯುವತಿಯರು! - Mahanayaka
3:29 PM Tuesday 9 - September 2025

10, 20 ಕೊಟ್ರೆ ಮುಟ್ಟಲ್ಲ, ಕೊಟ್ರೆ… 100, 200 ರೂಪಾಯಿಯನ್ನೇ ಕೊಡ್ಬೇಕು: ಹಣ ಕಲೆಕ್ಷನ್ ಗೆ ಇಳಿದ ಯುವತಿಯರು!

chikkamagaluru
25/05/2023

ಚಿಕ್ಕಮಗಳೂರು:  10, 20 ಕೊಟ್ರೆ ಮುಟ್ಟಲ್ಲ, ಕೊಟ್ರೆ… 100, 200 ರೂಪಾಯಿಯನ್ನೇ ಕೊಡ್ಬೇಕು, ಸ್ಟೈಲಾಗಿ ಡ್ರೆಸ್ ಮಾಡ್ಕೊಂಡು ಬಂದು ಹಣ ವಸೂಲಿ ಮಾಡ್ತಿರೋ ಲೇಡಿಸ್ ಬ್ಯಾಚ್  ಹಣಕ್ಕಾಗಿ ಸಾರ್ವನಿಕರನ್ನು ಪೀಡಿಸಿದ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆಯಿತು.


Provided by

ಮನೆಗಳು, ಅಂಗಡಿಗಳಿಗೆ ನುಗ್ಗಿದ ರಾಜಸ್ಥಾನ ಮೂಲದ ಯುವತಿಯರ ಗುಂಪು ಪ್ರಕೃತಿ ವಿಕೋಪದಿಂದ ಮನೆ ಬಿದ್ದು ಹೋಗಿದೆ, ಹಾಕೋಕೆ ಬಟ್ಟೆ ಇಲ್ಲ ಎಂದು ಹಣಕ್ಕಾಗಿ ಡಿಮ್ಯಾಂಡ್ ಇಟ್ಟಿದ್ದಾರೆ.

ಈ ತಂಡದಲ್ಲಿ ಸುಮಾರು 5 ಯುವತಿಯರಿದ್ದು, ಪ್ರಕೃತಿ ವಿಕೋಪದಿಂದ ಮನೆ–ಆಸ್ತಿ ಕಳೆದುಕೊಂಡಿದ್ದೇವೆ ನಮಗೆ ಹಣ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ. 10, 20 ರೂಪಾಯಿ ಯಾರಾದ್ರೂ ಕೊಡಲು ಬಂದ್ರೆ ಅತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಇನ್ನೂ ಸ್ಥಳೀಯ ವ್ಯಕ್ತಿಯೊಬ್ಬರು ಯುವತಿಯರನ್ನು ಯಾಕೆ ಹಣ ವಸೂಲಿ ಮಾಡ್ತಿದ್ದಿರಾ? ಎಂದು ಯುವತಿಯರಿಗೆ ಕ್ಲಾಸ್ ತೆಗೆದುಕೊಂಡಿದ್ದು, ಈ ವೇಳೆ ಯುವತಿಯರು ಆಟೋ ಹತ್ತಿ ಸ್ಥಳದಿಂದ ತೆರಳಿದ್ದಾರೆ.

ಕೇವಲ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದ ವಿವಿಧೆಡೆಗಳಲ್ಲಿ ಇಂತಹದ್ದೊಂದು ಯುವತಿಯರ ತಂಡ, ಕಾರ್ಯಾಚರಿಸುತ್ತಿದ್ದು, ಸಾರ್ವಜನಿಕರ ಬಳಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಇವರು ಹೇಳುತ್ತಿರುವ ಕಾರಣಗಳು ನಿಜವೋ ಸುಳ್ಳೋ ಅನ್ನೋದು ತಿಳಿದು ಬಂದಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ