30 ಗ್ರಾಮ ಪಂಚಾಯತ್ ಗಳಲ್ಲಿ 20 ಪಂಚಾಯತ್ ಗಳ ಮೇಲೆ ಎನ್.ಮಹೇಶ್ ಕಣ್ಣು | ಗ್ರಾಮಗಳ ಅಭಿವೃದ್ಧಿ ಕಡೆಗೆ ಎನ್.ಮಹೇಶ್ ಚಿತ್ತ - Mahanayaka
3:14 PM Saturday 2 - December 2023

30 ಗ್ರಾಮ ಪಂಚಾಯತ್ ಗಳಲ್ಲಿ 20 ಪಂಚಾಯತ್ ಗಳ ಮೇಲೆ ಎನ್.ಮಹೇಶ್ ಕಣ್ಣು | ಗ್ರಾಮಗಳ ಅಭಿವೃದ್ಧಿ ಕಡೆಗೆ ಎನ್.ಮಹೇಶ್ ಚಿತ್ತ

04/01/2021

ಚಾಮರಾಜನಗರ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಾಜಿ ಸಚಿವ,  ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಬೆಂಬಲಿತ 115 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಇದೀಗ ಎನ್.ಮಹೇಶ್ ಅವರು 20 ಗ್ರಾಮ ಪಂಚಾಯತ್ ಗಳನ್ನು ತಮ್ಮ ತೆಕ್ಕೆ ಎಳೆದುಕೊಳ್ಳುವುದಾಗಿ ಹೇಳಿದ್ದಾರೆ.

ಮುಂದೆ ನಡೆಯಲಿರುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಯ ಸಂದರ್ಭದಲ್ಲಿ  ನನ್ನನ್ನು ಇನ್ನೊಂದು ದೊಡ್ಡ ಶಕ್ತಿ ಬೆಂಬಲಿಸಲಿದ್ದು, ಹೀಗಾಗಿ ನಮ್ಮ ಸ್ಥಾನ ಬಲ 250-280 ಆಗುತ್ತದೆ. ಹೀಗಾಗಿ ನಾವು 30 ಗ್ರಾಮ ಪಂಚಾಯತ್ ಗಳಲ್ಲಿ 20 ಪಂಚಾಯತ್ ಗಳನ್ನು ನಮ್ಮ ತೆಕ್ಕೆಗೆ ಎಳೆದುಕೊಳ್ಳುತ್ತೇವೆ ಎಂದು ಎನ್.ಮಹೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯತ್ ಅಭ್ಯರ್ಥಿಗಳು  ತಮ್ಮ ಗ್ರಾಮ ಪಂಚಾಯತ್ ನಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಲು ನಾನು ಈಗಾಗಲೇ ಸೂಚನೆ ನೀಡಿದ್ದಾರೆ. ಅವರು ನೀಡುವ ಮಾಹಿತಿಯನ್ನು ಆಧರಿಸಿ ಗ್ರಾಮಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗುವುದು. ತನ್ನ ಅಧಿಕಾರ ವ್ಯಾಪ್ತಿ ಇರುವ ಎರಡೂವರೆ ವರ್ಷದೊಳಗೆ ಗ್ರಾಮಗಳ ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಎಂದು ಎನ್.ಮಹೇಶ್ ಹೇಳಿದರು.

ತೀವ್ರ ರಾಜಕೀಯ ಪೈಪೋಟಿಯ ನಡುವೆಯೂ ಎನ್.ಮಹೇಶ್ ಬೆಂಬಲಿತ 115 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಗೆಲುವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್.ಮಹೇಶ್ ಅವರಿಗೆ ಸಾಧಕವಾಗಿ ಪರಿಣಮಿಸಲಿದೆ ಎಂದು ವಿಮರ್ಶೆಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ