51 ವರ್ಷದ ಪತ್ನಿ ಅನುಮಾನಾಸ್ಪದವಾಗಿ ಸಾವು, 21 ವರ್ಷದ ಪತಿಯ ಬಂಧನ - Mahanayaka

51 ವರ್ಷದ ಪತ್ನಿ ಅನುಮಾನಾಸ್ಪದವಾಗಿ ಸಾವು, 21 ವರ್ಷದ ಪತಿಯ ಬಂಧನ

26/12/2020

ತಿರುವನಂತಪುರಂ: 51 ವರ್ಷದ ಪತ್ನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಕಾರಣ ಆಕೆಯ 26 ವರ್ಷದ ಪತಿಯನ್ನು  ಕೇರಳ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಕಾರಕೋಣಂನ ಥ್ರೆಸ್ಯಾಪುರಂನ ಸಖಾ ಕುಮಾರಿ ಮೃತ ಮಹಿಳೆಯಾಗಿದ್ದಾರೆ. ಕ್ರಿಸ್ ಮಸ್ ಅಲಂಕಾರದ ಸಂದರ್ಭದಲ್ಲಿ ಕರೆಂಟ್ ಶಾಕ್ ಹೊಡೆದಿದೆ ಎಂದು ಪತಿ 21 ವರ್ಷ ಅರುಣ್ ಖಾಸಗಿ ಆಸ್ಪತ್ರೆ ವೈದ್ಯರಿಗೆ ತಿಳಿಸಿ, ಆಸ್ಪತ್ರೆಗೆ ದಾಖಲಿಸಿದ್ದ.

ಮಹಿಳೆಯ ದೇಹದ ಪ್ರಾಥಮಿಕ ಪರೀಕ್ಷೆ ನಡೆಸಿದಾಗ ವೈದ್ಯರಿಗೆ ಅನುಮಾನ ಮೂಡಿದ್ದು,  ತಕ್ಷಣವೇ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅರುಣ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಿಂಗಳ ಹಿಂದೆಯಷ್ಟೆ ನಾವು ವಿವಾಹವಾಗಿದ್ದೆವು ಎಂದು ಅರುಣ್ ಪೊಲೀಸರ ವಿಚಾರಣೆಯ ವೇಳೆ ತಿಳಿಸಿದ್ದಾನೆ.


Provided by

ಇನ್ನೂ ಮಹಿಳೆ ಹೇಗೆ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಇನ್ನೂ ನಿಖರವಾಗಿ ಏನೂ ಹೇಳಲು ಸಾಧ್ಯವಿಲ್ಲ. ಪೊಲೀಸರ ತನಿಖೆಯ ನಂತರವೇ ಹೇಳಲು ಸಾಧ್ಯ. ಪೊಲೀಸರು ಸದ್ಯ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಕೈತಲುಪುತ್ತಿದ್ದಂತೆಯೇ ಮಹಿಳೆಯ ಸಾವಿನ ಬಗ್ಗೆ ನಿಖರ ಮಾಹಿತಿ ಲಭ್ಯವಾಗಬೇಕಿದೆ.

ಇತ್ತೀಚಿನ ಸುದ್ದಿ