ಮಾಧ್ಯಮಗಳ ವೈಫಲ್ಯದ ನಡುವೆ ಟಿವಿ ಚಾನೆಲ್ ಆರಂಭಿಸಿದ ಕಾಂಗ್ರೆಸ್ - Mahanayaka

ಮಾಧ್ಯಮಗಳ ವೈಫಲ್ಯದ ನಡುವೆ ಟಿವಿ ಚಾನೆಲ್ ಆರಂಭಿಸಿದ ಕಾಂಗ್ರೆಸ್

inctv
25/04/2021

ನವದೆಹಲಿ: ಆಡಳಿತರೂಢ ಸರ್ಕಾರವನ್ನು ಪ್ರಶ್ನಿಸಲು ದೇಶದ ಪ್ರಮುಖ ಮಾಧ್ಯಮಗಳು ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಐಎಸ್ ಸಿ ಟಿವಿಯನ್ನು ಏಪ್ರಿಲ್ 24ರಂದು ಆರಂಭಿಸಿದೆ.

ಪಕ್ಷದ ಸಂದೇಶಗಳು, ವಿಚಾರಗಳನ್ನು ನೇರವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಅದು ಈ ಚಾನೆಲ್ ಆರಂಭಿಸಲಾಗಿದೆ, ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಸಲುವಾಗಿ ಕಾಂಗ್ರೆಸ್ ಈ ವೇದಿಕೆಯನ್ನು ಬಳಸಿಕೊಳ್ಳಲಿದೆ ಎಂದು  ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ ತಿಳಿಸಿದ್ದಾರೆ.

ಸರ್ಕಾರವನ್ನು ಪ್ರಶ್ನಿಸಿ, ಸತ್ಯಾಸತ್ಯತೆ ಮುಂದಿಡಲು ಕಾಂಗ್ರೆಸ್ ತನ್ನ ಐಟಿ ಸೆಲ್ ಬಲಪಡಿಸಿಕೊಂಡಿದ್ದು, 5 ಲಕ್ಷಕ್ಕೂ ಅಧಿಕ ಮಂದಿ ನೇಮಕ ಮಾಡಿಕೊಂಡಿದೆ. ಈ ಮೂಲಕ ಮೋದಿ ಮೀಡಿಯಾಗಳಿಗೆ ಪ್ರತಿರೋಧ ಒಡ್ಡಲು ಕಾಂಗ್ರೆಸ್ ಸಜ್ಜಾಗಿದೆ ಎಂದು ತಿಳಿದು ಬಂದಿದೆ.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by

ಇತ್ತೀಚಿನ ಸುದ್ದಿ