ಬಾಲಕಿಯನ್ನು ಬೆತ್ತಲೆಗೊಳಿಸಿ ಚಿತ್ರ ಹಿಂಸೆ: ಐವರು ಯುವಕರ ಫೋಟೋ ರಿಲೀಸ್ ಮಾಡಿದ ಪೊಲೀಸರು - Mahanayaka

ಬಾಲಕಿಯನ್ನು ಬೆತ್ತಲೆಗೊಳಿಸಿ ಚಿತ್ರ ಹಿಂಸೆ: ಐವರು ಯುವಕರ ಫೋಟೋ ರಿಲೀಸ್ ಮಾಡಿದ ಪೊಲೀಸರು

police note
27/05/2021

ಅಸ್ಸಾಂ: ಬಾಲಕಿಯೋರ್ವಗಳನ್ನು ನಗ್ನಗೊಳಿಸಿ, ಥಳಿಸಿ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋಗೆ ಸಂಬಂಧಿಸಿದಂತೆ ಐವರು ಆರೋಪಿಗಳ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಈ ಘಟನೆ ನಡೆದದ್ದು ಎಲ್ಲಿ ಎಂಬ ಬಗ್ಗೆ ಸ್ಪಷ್ಟವಾದ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ, ಈ ವಿಡಿಯೋದಲ್ಲಿ ಐವರು ಯುವಕರು ಬಾಲಕಿಯೋರ್ವಗಳನ್ನು ನಗ್ನವಾಗಿ ಲೈಂಗಿಕ ಶೋಷಣೆ ಹಾಗೂ ಹಲ್ಲೆ ನಡೆಸುತ್ತಿರುವುದು ಸೆರೆಯಾಗಿದೆ.

ಘಟನೆ ಸಂಬಂಧ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಆರೋಪಿಗಳನ್ನು ಗುರುತಿಸುವಂತೆ  ಆರೋಪಿಗಳ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ನಿಮ್ಮಲ್ಲಿ ಯಾರಿಗಾದರೂ ಈ ಆರೋಪಿಗಳ ಪರಿಚಯ ಇದ್ದರೆ ನಮನ್ನು ಸಂಪರ್ಕಿಸಿ ಎಂದು ಈ ವಿಡಿಯೋ ಸಂಬಂಧ ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by

ಇತ್ತೀಚಿನ ಸುದ್ದಿ