ಸಿಡಿಲು ಬಡಿದು ಒಂದೇ ದಿನ 20 ಮಂದಿ ಸಾವು - Mahanayaka

 ಸಿಡಿಲು ಬಡಿದು ಒಂದೇ ದಿನ 20 ಮಂದಿ ಸಾವು

lighting death
08/06/2021

ಕೋಲ್ಕತ್ತ: ಸಿಡಿಲು ಬಡಿದ ಪರಿಣಾಮ ಒಂದೇ ದಿನದಲ್ಲಿ 20 ಮಂದಿ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಭಾರೀ ಸಿಡಿಲಿಗೆ ಪಶ್ಚಿಮ ಬಂಗಾಳ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವು ಸಂಭವಿಸಿದೆ.

 ಪಶ್ಚಿಮ ಬಂಗಾಳದ ಮುರ್ಷಿದಾಬಾದ್​, ಹೂಗ್ಲಿ, ಪುರ್ಬಾ ಮೆದಿನಿಪುರ ಸೇರಿ ಮೂರು ಜಿಲ್ಲೆಗಳಲ್ಲಿ ಸೋಮವಾರ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ.

ಮುರ್ಷಿದಾಬಾದ್​ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ತಲಾ 9 ಜನರು ಸಿಡಿಲಿಗೆ ಬಲಿಯಾದರೆ, ಪುರ್ಬಾ ಮೆದಿನಿಪುರ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮುರ್ಷಿದಾಬಾದ್​ ನಲ್ಲಿ  ಸಿಡಿಲು ಬಡಿದ ಪರಿಣಾಮ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪಶ್ಚಿಮ ಬಂಗಾಳದ ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by

ಸಿಡಿಲು ಬಡಿದು ಮೃತಪಟ್ಟವರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ  ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರವನ್ನು ಘೋಷಿಸಲಾಗಿದೆ.

ಇತ್ತೀಚಿನ ಸುದ್ದಿ