ಹಸಿವು ನೀಗಿಸಲು ಕೂದಲನ್ನೇ ತಿಂದ ಬಾಲಕಿ | ಹೊಟ್ಟೆಯಲ್ಲಿ ಶೇಖರಣೆಯಾಗಿತ್ತು 2 ಕೆಜಿ ಕೂದಲು - Mahanayaka

ಹಸಿವು ನೀಗಿಸಲು ಕೂದಲನ್ನೇ ತಿಂದ ಬಾಲಕಿ | ಹೊಟ್ಟೆಯಲ್ಲಿ ಶೇಖರಣೆಯಾಗಿತ್ತು 2 ಕೆಜಿ ಕೂದಲು

hydrabad
12/06/2021

ಹೈದರಾಬಾದ್:  ಹಸಿವು ತಾಳಲಾರದೇ ಕಳೆದ 5 ತಿಂಗಳಿನಿಂದ  17 ವರ್ಷದ ಯುವತಿ ತನ್ನ ತಲೆಕೂದಲನ್ನೇ ತಿಂದ ಘಟನೆ ನಡೆದಿದ್ದು, ಹೀಗೆ ತಿಂದ ತಲೆಗೂದಲು ಬರೋಬ್ಬರಿ 2 ಕೆ.ಜಿ.ಗಳಷ್ಟು ಹೊಟ್ಟೆಯಲ್ಲಿ ಶೇಖರಣೆಯಾಗಿದ್ದು, ಇದೀಗ ತೆಲಂಗಾಣದ ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ನಡೆಸಿ ಕೂದಲು ಹೊರ ತೆಗೆದಿದ್ದಾರೆ.

ಹೈದರಾಬಾದ್ ನ ಶಂಶಾಬಾದ್ ಮೂಲದ ಈ  ಹುಡುಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಹಸಿವನ್ನು ನೀಗಿಸಲು ತನ್ನ ಕೂದಲನ್ನೇ ಸೇವಿಸುತ್ತಾ ಬಂದಿದ್ದಳು ಎಂದು ಹೇಳಲಾಗಿದೆ.  ಹೀಗೆ ಸೇವಿಸಿದ್ದ ಕೂದಲು ಹೊಟ್ಟೆ ಹಾಗೂ ಸಣ್ಣ ಕರುಳಿನಲ್ಲಿ ಶೇಖರಣೆಯಾಗಿತ್ತು.

ಒಂದು ತಿಂಗಳ ಹಿಂದೆ ಬಾಲಕಿಯು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದಾಗ ಈ ವಿಚಾರ ಬೆಳಕಿಗೆ ಬಂದಿದೆ. ಬಾಲಕಿ ಚಿಕಿತ್ಸೆಗೆ ಆಗಮಿಸಿದ್ದ ವೇಳೆ ಆಕೆಗೆ ಕೊರೊನಾ ಪಾಸಿಟಿವ್ ಕೂಡ ಇದ್ದುದರಿಂದ ಮೊದಲು ಕೊರೊನಾಕ್ಕೆ ಚಿಕಿತ್ಸೆ ನೀಡಲಾಗಿದ್ದು, ಆ ಬಳಿಕ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು,  ಬಾಲಕಿಯ ಹೊಟ್ಟೆಯಿಂದ 2 ಕೆ.ಜಿಗಳಷ್ಟು ಕೂದಲನ್ನು ಹೊರತೆಗೆಯಲಾಗಿದೆ.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by

ಉಸ್ಮಾನಿಯ ಆಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದರ್ ಬಿ. ಅವರನ್ನೊಳಗೊಂಡ ವೈದ್ಯರ ತಂಡವು ಈ ಶಸ್ತ್ರ ಚಿಕಿತ್ಸೆ ನಡೆಸಿದ್ದು, 150 ಸೆಂ.ಮೀ. ಉದ್ದದ 2 ಕೆಜಿಗಳಷ್ಟು ಕೂದಲನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಇತ್ತೀಚಿನ ಸುದ್ದಿ