ಆ್ಯಂಕರ್ ಅನುಶ್ರೀ ವಿರುದ್ಧ ದಾಖಲೆ ರಹಿತ ಆರೋಪ | ಪ್ರಶಾಂತ್ ಸಂಬರ್ಗಿಯ ಬೆವರಳಿಸಿದ ಚಕ್ರವರ್ತಿ ಚಂದ್ರಚೂಡ್ - Mahanayaka
10:43 AM Friday 11 - September 2026

ಆ್ಯಂಕರ್ ಅನುಶ್ರೀ ವಿರುದ್ಧ ದಾಖಲೆ ರಹಿತ ಆರೋಪ | ಪ್ರಶಾಂತ್ ಸಂಬರ್ಗಿಯ ಬೆವರಳಿಸಿದ ಚಕ್ರವರ್ತಿ ಚಂದ್ರಚೂಡ್

anushree
10/09/2021

ಬೆಂಗಳೂರು: ನಟಿ ಅನುಶ್ರೀ ವಿರುದ್ಧ ಹೇಳಿಕೆ ಹಾಗೂ ನಾನು ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಎಂಬೆಲ್ಲ ಹೇಳಿಕೆ ನೀಡುತ್ತಿರುವ ಪ್ರಶಾಂತ್ ಸಂಬರ್ಗಿ ವಿರುದ್ಧ ಚಕ್ರವರ್ತಿ ಚಂದ್ರಚೂಡ್ ಕಿಡಿಕಾರಿದ್ದು, ಈ ರೀತಿಯ ಹೇಳಿಕೆ ನೀಡಲು ಅವರ ಬಳಿಯಲ್ಲಿ ಏನು ದಾಖಲೆ ಇದೆ ಎಂದು ಪ್ರಶ್ನಿಸಿದ್ದಾರೆ.

ಬಿಗ್ ಬಾಸ್ ನಲ್ಲಿ ಕೂಡ ನಾನು ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಎಂದು ಅವರು ಹೇಳಿದ್ದರು. ಆಗಲೂ ನಾನು ವಿರೋಧಿಸಿದ್ದೆ. ಆದರೆ, ಅದೊಂದು ಶೋ ಎನ್ನುವ ಕಾರಣಕ್ಕೆ ಸುಮ್ಮನಾದೆ. ಐತಿಹಾಸಿಕವಾಗಿ ರಾಣಿ ಚೆನ್ನಮ್ಮಗೆ ಮೊಮ್ಮಗ ಇರಲು ಸಾಧ್ಯವಿಲ್ಲ. ಈ ರೀತಿಯ ಹೇಳಿಕೆ ಅವರು ನೀಡಿದರೆ ಜನ ನಗುತ್ತಾರೆ ಎಂದು ಅವರು ಹೇಳಿದರು.

ಕಳೆದ ಮೂರು ದಿನಗಳ ಹಿಂದೆ ನಿರೂಪಕಿ ಅನುಶ್ರೀ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ 12 ಕೋಟಿ, ಬೆಂಗಳೂರಿನಲ್ಲಿ 4 ಕೋಟಿ ಮನೆ ಕಟ್ಟಿದ್ದಾರೆ, ಐಶಾರಾಮಿ ಕಾರಿದೆ ಇದೆಲ್ಲ ಡ್ರಗ್ಸ್ ನಿಂದ ಬಂತು ಎಂದು ಆರೋಪ ಮಾಡುತ್ತಿದ್ದಾರೆ. ಇವುಗಳಿಗೆಲ್ಲ ಅವರು ದಾಖಲೆ ನೀಡಬೇಕಲ್ವಾ? ಶುಗರ್ ಡ್ಯಾಡಿ ಎನ್ನುವುದು ದೇವರಾಜ ಅರಸು, ಗುಂಡೂರಾವ್ ಹಾಗೂ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ನಮಗೆ ಗೊತ್ತಿರುವ ಪದ. ಇದಕ್ಕೆ ಸಂಬಂಧ ಪಟ್ಟ ದಾಖಲೆ ಸಂಬರ್ಗಿ ಬಳಿ ಇದೆಯೇ? ಎಂದು ಅವರು ಪ್ರಶ್ನಿಸಿದರು.

ಮಾಜಿ ಮುಖ್ಯುಮಂತ್ರಿಯವರು ಇನ್ನೊಬ್ಬ ನಟಿಗೆ ಶುಗರ್ ಡ್ಯಾಡಿ ಆಗಿದ್ದಾರೆ. ಲಕ್ಷಾಂತರ ರೂ. ಹಣ ಕೊಡ್ತಾರೆ, ಡ್ರಗ್ಸ್ ಪೆಡ್ಲಿಂಗ್ ಮಾಡ್ತಾರೆ ಎಂದೆಲ್ಲ ಸಂಬರ್ಗಿ ಆರೋಪ ಮಾಡುತ್ತಿದ್ದಾರೆ. ದಾಖಲೆಗಳೇ ಇಲ್ಲದೇ ಅನುಶ್ರೀ ಬಗ್ಗೆ ಸಂಬರ್ಗಿ ಹೇಗೆ ಆರೋಪ ಮಾಡ್ತಿರಾ? ಎಂದು ಚಂದ್ರಚೂಡ್ ಪ್ರಶ್ನೆಗಳ ಬಾಣವನ್ನೇ ಬಿಟ್ಟಿದ್ದಾರೆ.

ಪ್ರಶಾಂತ್ ಸಂಬರ್ಗಿ ಸುಖಾಸುಮ್ಮನೆ ಮಾತನಾಡುತ್ತಿದ್ದಾರೆ. ಅವರು ಮಾಡಿರುವ ಆರೋಪದ ಬಗ್ಗೆ ಒಂದು ಶೀಟ್ ಆದರೂ ದಾಖಲೆಗಳನ್ನು ನೀಡಲಿ. ಸುಮ್ಮನೆ ಪ್ರಚಾರ ತೆಗೆದುಕೊಂಡು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಲು ಅವರು ಹವಣಿಸುತ್ತಿದ್ದಾರೆ. ಅದಕ್ಕಾಗಿ ಕುತಂತ್ರ ಮಾಡುತ್ತಿದ್ದಾರೆ ಎಂದು ಚಂದ್ರಚೂಡ್ ಆರೋಪಿಸಿದರು.

ಇನ್ನಷ್ಟು ಸುದ್ದಿಗಳು…

ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಲಾರಿ: 6 ಮಂದಿ ಸಾವು, ಇಬ್ಬರಿಗೆ ಗಂಭೀರ ಗಾಯ

ಪೆಟ್ರೋಲ್ ತುಂಬುತ್ತಿದ್ದ ವೇಳೆ ಕಾರಿಗೆ ಬೆಂಕಿ: ಬಾಲಕಿ ಸಹಿತ 9 ಮಹಿಳೆಯರು ಸುಟ್ಟು ಕರಕಲು

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರು, ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ: ವ್ಯಾಪಕ ಆಕ್ರೋಶ

ಪೊಲೀಸರ ಎದುರೇ ಬೆತ್ತಲಾಗಿ ಗಾಲ್ಫ್ ಕಾರ್ಟ್ ಓಡಿಸಿ ಶಾಕ್ ನೀಡಿದ ಯುವತಿ!

ಸಾಬಿಯಾ ಸೈಫಿ ಅತ್ಯಾಚಾರ, ಬರ್ಬರ ಹತ್ಯೆ ವಿರುದ್ಧ ಎಸ್ ಡಿಪಿಐ ಬೃಹತ್ ಹಕ್ಕೊತ್ತಾಯ

ಯಡಿಯೂರಪ್ಪನವರನ್ನು ಕೆಳಗಿಳಿಸಿದ ಫಲವನ್ನು ಇವರೆಲ್ಲ ಉಣ್ಣುತ್ತಾರೆ ನೋಡಿ | ಕೋಡಿ ಶ್ರೀಗಳಿಂದ ಸಸ್ಪೆನ್ಸ್, ಥ್ರಿಲ್ಲರ್ ಭವಿಷ್ಯ!

ಚೌತಿಗೂ ಮೊದಲೇ ಬಿಬಿಎಂಪಿ ಕಚೇರಿ ಆವರಣಕ್ಕೆ ಬಂದ ಗಣಪ! |  ಗಣೇಶೋತ್ಸವಕ್ಕೆ ನಿರ್ಬಂಧದ ವಿರುದ್ಧ ಪ್ರತಿಭಟನೆ

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti