ಕಾರು ಅಪಘಾತದಲ್ಲಿ ಸೋಶಿಯಲ್ ಮಿಡಿಯಾ ಸ್ಟಾರ್ ದುರಂತ ಸಾವು! - Mahanayaka

ಕಾರು ಅಪಘಾತದಲ್ಲಿ ಸೋಶಿಯಲ್ ಮಿಡಿಯಾ ಸ್ಟಾರ್ ದುರಂತ ಸಾವು!

rohit bhati
22/11/2022

ಮರವೊಂದಕ್ಕೆ ಕಾರು ಡಿಕ್ಕಿಯಾಗಿ ಸೋಶಿಯಲ್ ಮಿಡಿಯಾ ಸ್ಟಾರ್ ರೋಹಿತ್ ಭಾಟಿ ಸಾವನ್ನಪ್ಪಿದ್ದು, ಅತೀಯಾದ ವೇಗವೇ ಅಪಘಾತಕ್ಕೆ ಕಾರಣವಾಯ್ತೆ ಅನ್ನೋ ಅನುಮಾನ ಸೃಷ್ಟಿಯಾಗಿದೆ.

25 ವರ್ಷದ ರೋಹಿತ್ ಭಾಟಿ ಗ್ರೇಟರ್ ನೋಯ್ದಾ ಹೈವೇ ರಸ್ತೆಯಲ್ಲಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದು, ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಕಾರು ಅಪಘಾತದ ವೇಳೆ ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದರು. ಕಾರಿನಲ್ಲಿದ್ದ ಮನೋಜ್ ಮತ್ತು ಅತೀಷ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರೆ, ರೋಹಿತ್ ಸಾವನ್ನಪ್ಪಿದ್ದಾರೆ.

ರೋಹಿತ್ ಭಾಟಿ  ಫೇಸ್‌ಬುಕ್, ಇನ್‌ ಸ್ಟಾಗ್ರಾಮ್‌ನಲ್ಲಿ ವಿಡಿಯೋಗಳನ್ನ ಪೋಸ್ಟ್ ಮಾಡಿ ಭಾರೀ ಜನಪ್ರಿಯರಾಗಿದ್ದವರು. ಇವರಿಗೆ ಇನ್‌ ಸ್ಟಾಗ್ರಾಮ್‌ನಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಜನ ಫಾಲೋವಸ್೯ ಗಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ