ಬಾಸ್ ನಿಮ್ಮನ್ನ ಈ ರೀತಿ ನೋಡೋಕೆ  ಕಷ್ಟ ಆಗ್ತಿದೆ: ಬಿಕ್ಕಿ ಬಿಕ್ಕಿ ಅತ್ತ ದರ್ಶನ್ ಅಭಿಮಾನಿ - Mahanayaka

ಬಾಸ್ ನಿಮ್ಮನ್ನ ಈ ರೀತಿ ನೋಡೋಕೆ  ಕಷ್ಟ ಆಗ್ತಿದೆ: ಬಿಕ್ಕಿ ಬಿಕ್ಕಿ ಅತ್ತ ದರ್ಶನ್ ಅಭಿಮಾನಿ

dharshan
14/06/2024


Provided by

ನಟ ದರ್ಶನ್ ಬಂಧನವಾದಂದಿನಿಂದ ದರ್ಶನ್ ಅಭಿಮಾನಿಗಳು ಇದು ದರ್ಶನ್ ವಿರುದ್ಧ ಮಾಡಿರುವ ಪಿತೂರಿ, ಮಾಧ್ಯಮದವರಿಗೆ ದರ್ಶನ್ ವಿಚಾರಗಳು ಟಿಆರ್ ಪಿಯ ಸರಕು ಎಂದು ಆರೋಪಿಸುತ್ತಿದ್ದಾರೆ.

ಈ ನಡುವೆ ಕೆಲವು ಸುದ್ದಿವಾಹಿನಿಗಳ ಸುದ್ದಿವಾಚಕರು ದರ್ಶನ್ ಅಭಿಮಾನಿಗಳಿಗೆ ಸವಾಲುಗಳನ್ನು ಹಾಕೋದು, ಅಭಿಮಾನಿಗಳನ್ನು ತರಾಟೆಗೆತ್ತಿಕೊಳ್ಳುತ್ತಿರುವ ದೃಶ್ಯಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ನಡುವೆ ದರ್ಶನ್ ಅವರ ಮಹಿಳಾ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅವರ ಬಂಧನದ ಬಗ್ಗೆ ಕಣ್ಣೀರು ಹಾಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋ ಮಾಡಿ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ, ಬಾಸ್ ನಿಮ್ಮನ್ನ ಈ ರೀತಿ ನೋಡೋಕೆ ಮನಸ್ಸಿಗೆ ತುಂಬಾ ಕಷ್ಟ ಆಗ್ತಿದೆ, ಆದ್ರೆ ನಿಮಗೆ  ಯಾವುದೆ ಕಷ್ಟ ಬಂದ್ರು ನಿಮ್ಮ ಸೆಲೆಬ್ರೆಟೀಸ್ ನಿಮ್ ಜೊತೆ ಯಾವಗ್ಲೂ ಇರ್ತಿವಿ ಅಂತ ಶೀರ್ಷಿಕೆ ನೀಡಿ ವಿಡಿಯೋ ಹಂಚಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ