ರಮೇಶ ಕೆ.ಎಲ್. ಅವರಿಗೆ ಪಿಎಚ್ ಡಿ ಪದವಿ - Mahanayaka

ರಮೇಶ ಕೆ.ಎಲ್. ಅವರಿಗೆ ಪಿಎಚ್ ಡಿ ಪದವಿ

ramesha k l
02/07/2025


Provided by

ಮೈಸೂರು: ಆಹಾರ ವಿಜ್ಞಾನ ಮತ್ತು ಪೋಷಣೆಯಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಮಾರ್ಗದರ್ಶಿಗಳಾಗಿರುವ  ರಮೇಶ ಕೆ.ಎಲ್. ಅವರಿಗೆ ಕರ್ನಾಟಕ ರಾಜ್ಯ  ಮುಕ್ತ ಗಂಗೋತ್ರಿ ಮೈಸೂರು(KSOU) ಪಿಎಚ್ ಡಿ ಪದವಿ ಘೋಷಿಸಿದೆ.

ಪಿಎಚ್ ಡಿ ಮುಕ್ತ ವಿವಾ–ವೋಸ್ ಸಮಿತಿಯ ಶಿಫಾರಸಿನ ಮೇರೆಗೆ ಉಪಕುಲಪತಿಗಳು ಈ ಆಯ್ಕೆ ಮಾಡಿದೆ. ಡಾ. ಹೇಮಲತಾ ಎಂ.ಎಸ್. ಅವರ ಮಾರ್ಗದರ್ಶನದಲ್ಲಿ ರಮೇಶ ಕೆ.ಎಲ್. ಅವರು ಸಲ್ಲಿಸಿದ್ದ ಸ್ಥಳೀಯ ಹಸಿರು ಎಲೆ ತರಕಾರಿಗಳ ಪೌಷ್ಟಿಕಾಂಶ ಮತ್ತು ಪೌಷ್ಟಿಕಾಂಶ ಗುಣಲಕ್ಷಣಗಳ ಅಧ್ಯಯನಗಳು(“Studies on Nutritional and Nutraceutical Properties of Native Green Leafy Vegetables”) ಪ್ರಬಂಧಕ್ಕೆ ಪಿಎಚ್ ಡಿ ಪದವಿ ನೀಡಲಾಗಿದೆ.

ಮುಂದಿನ ಘಟಿಕೋತ್ಸವದಲ್ಲಿ ರಮೇಶ ಕೆ.ಎಲ್. ಅವರಿಗೆ ಪಿಎಚ್ ಡಿ ಪದವಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ