ಮಂಗಳೂರು: ಮಾದಕ ವಸ್ತು ಸೇವನೆ ಪ್ರಕರಣ: ವಿವಿಧ ಠಾಣಾ ವ್ಯಾಪ್ತಿಯಲ್ಲಿ ಆರು ಮಂದಿ ಸೆರೆ
ಮಂಗಳೂರು: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದ ಮೇಲೆ ಆರು ಮಂದಿಯನ್ನು ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ.
ಪಾಂಡೇಶ್ವರ ಠಾಣೆ: ಸೆಪ್ಟೆಂಬರ್ 8ರಂದು ಮಾರ್ನಾಮಿಕಟ್ಟೆ ಬಳಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮಹಾಕಾಳಿಪಡ್ಪುವಿನ ದೈವಿಕ್ (18) ಬಂಧನ.
ಕಂಕನಾಡಿ ನಗರ ಠಾಣೆ: ಸೆಪ್ಟೆಂಬರ್ 9ರಂದು ಜಪ್ಪಿನಮೊಗರು ಕಡೇಕಾರು ಸೇತುವೆ ಬಳಿ ಬಜಾಲ್ ಪಕ್ಕಳಡ್ಕದ ಮುಹಮ್ಮದ್ ಫರಾನ್ (20) ಸೆರೆ.
ಬಂದರ್ ಠಾಣೆ: ಸೆಪ್ಟೆಂಬರ್ 9ರಂದು ಬಾವಟಗುಡ್ಡೆ ಮತ್ತು ಉತ್ತರ ದಕ್ಕೆ ಬಳಿ ಕುದ್ರೋಳಿಯ ಮುಹಮ್ಮದ್ ಹರಿಯೆಮ್ (26), ಉಳ್ಳಾಲದ ಮುಹಮ್ಮದ್ ಅರಾಫತ್ (30) ಹಾಗೂ ಮುಹಮ್ಮದ್ ಇಕ್ಬಾಲ್ (35) ಬಂಧನ.
ಉಳ್ಳಾಲ ಠಾಣೆ: ಸೆಪ್ಟೆಂಬರ್ 9ರಂದು ತಲಪಾಡಿ ಗ್ರಾಮದ ಕೆ.ಸಿ.ರೋಡ್ ಜಂಕ್ಷನ್ ಬಳಿ ದ್ಯಾನ್‌ಶ್ ಎಂ. ಎಂಬಾತನ ಸೆರೆ.
ಬಂಧಿತ ಎಲ್ಲ ಆರೋಪಿಗಳನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ವಿರುದ್ಧ ಎನ್ ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























