ರೈಲಿನಲ್ಲಿ ದಂಪತಿಯ ಅಸಭ್ಯ ವರ್ತನೆ: ತರಾಟೆಗೆ ತೆಗೆದುಕೊಂಡ ಸಹಪ್ರಯಾಣಿಕ ಮಹಿಳೆ, ವಿಡಿಯೋ ವೈರಲ್!
ರೈಲು ಪ್ರಯಾಣದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಕೆಲವರ ಅನುಚಿತ ವರ್ತನೆಗಳು ಸದಾ ಚರ್ಚೆಗೆ ಗ್ರಾಸವಾಗುತ್ತವೆ. ಸದ್ಯ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಚಲಿಸುವ ರೈಲಿನಲ್ಲಿ ದಂಪತಿಯೊಬ್ಬರು ಜನರ ಎದುರೇ ಪರಸ್ಪರ ಒಬ್ಬರ ಮುಂದೊಬ್ಬರು ಮಲಗಿ ಅನುಚಿತವಾಗಿ ವರ್ತಿಸಿರುವುದನ್ನು ಕಾಣಬಹುದು.
ಇದನ್ನು ಕಂಡು ಕೆರಳಿದ ಸಹಪ್ರಯಾಣಿಕ ಮಹಿಳೆಯೊಬ್ಬರು ನೇರವಾಗಿ ಆ ದಂಪತಿಯ ನಡವಳಿಕೆಯನ್ನು ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ. ರೈಲಿನಂತಹ ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಸಭ್ಯ ವರ್ತನೆಯು ಇತರ ಪ್ರಯಾಣಿಕರಿಗೆ ತೀವ್ರ ಅನಾನುಕೂಲ ಮತ್ತು ಮುಜುಗರವನ್ನುಂಟು ಮಾಡುತ್ತದೆ ಎಂದು ಮಹಿಳೆ ಕಠಿಣ ಸ್ವರದಲ್ಲಿ ವಿವರಿಸಿ, ಸಾರ್ವಜನಿಕ ಸಭ್ಯತೆಯನ್ನು ಗೌರವಿಸುವಂತೆ ಒತ್ತಾಯಿಸಿದ್ದಾರೆ. ಈ ಸಮಯದಲ್ಲಿ ಹತ್ತಿರದಲ್ಲಿದ್ದ ಇತರ ಪ್ರಯಾಣಿಕರು ಕೂಡ ಈ ಘಟನೆಯನ್ನು ವೀಕ್ಷಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಎಕ್ಸ್ (X) ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಮೂರು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರಿಂದ ಭಿನ್ನ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಇತರರ ಸೌಕರ್ಯ ಮತ್ತು ವೈಯಕ್ತಿಕ ಮಿತಿಗಳನ್ನು ಗೌರವಿಸಬೇಕು ಎಂದು ಕೆಲವರು ಮಹಿಳೆಯ ಕ್ರಮವನ್ನು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಇಂತಹ ಸಂದರ್ಭಗಳನ್ನು ಮತ್ತಷ್ಟು ಶಾಂತ ಹಾಗೂ ಗೌರವಯುತವಾಗಿ ಬಗೆಹರಿಸಿಕೊಳ್ಳಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಈ ವಿಡಿಯೋ ರೀಲ್ ಆಗಿರಬಹುದೇ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
A video from a train has sparked discussion online after a woman was seen confronting a couple over their intimate behavior in a public space. The incident has raised mixed reactions about public displays of affection and personal boundaries. pic.twitter.com/sfu7gi4Ufw
— Atulya (@DesiMemesTweets) September 20, 2026




























