ವಾಲ್ಮೀಕಿಯ ರಾಮಾಯಣ, ವ್ಯಾಸನ ಭಾರತ ನನಗೆ ಇಷ್ಟ ಎಂದ ಬರಾಕ್ ಒಬಾಮ - Mahanayaka
8:40 AM Thursday 7 - December 2023

ವಾಲ್ಮೀಕಿಯ ರಾಮಾಯಣ, ವ್ಯಾಸನ ಭಾರತ ನನಗೆ ಇಷ್ಟ ಎಂದ ಬರಾಕ್ ಒಬಾಮ

17/11/2020

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತಮ್ಮ “ಎ ಪ್ರಾಮಿಸ್ಡ್ ಲ್ಯಾಂಡ್‌” ನಲ್ಲಿ  ಪುಸ್ತಕದಲ್ಲಿ ರಾಮಾಯಣ ಹಾಗೂ ಮಹಾಭಾರತ ಕೃತಿಗಳನ್ನು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.  ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕವಾಗಿ ಬರೆದಿದ್ದ ಪುಸ್ತಕದಲ್ಲಿ ಈ ವಿಚಾರಗಳನ್ನು ಅವರು ಹೇಳಿದ್ದಾರೆ.

ತನ್ನ ಬಾಲ್ಯದಿಂದಲೂ ರಾಮಾಯಣ ಹಾಗೂ ಮಹಾಭಾರತ ಪುಸ್ತಕಗಳನ್ನು ಓದಿ ಆ ಬಳಿಕ ನನ್ನ ಮನಸ್ಸಿನಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿತ್ತು ಎಂದು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

ಅಂದ ಹಾಗೆ ರಾಮಾಯಣ ಎಂಬ ಗ್ರಂಥವನ್ನು ವಾಲ್ಮೀಕಿ ಸಮುದಾಯದ ಮಹರ್ಷಿ ವಾಲ್ಮಿಕಿ ರಚಿಸಿದರು. ಮಹಾಭಾರತವನ್ನು ಮೀನುಗಾರರ ಮಗಳು  ಸತ್ಯಾವತಿಯ ಪುತ್ರ ವ್ಯಾಸ ಬರೆಯುತ್ತಾರೆ. ಇದು ಒಂದು ಅದ್ಭುತ ಕಥೆಯನ್ನು ಹೊಂದಿರುವ ಕಥೆಯಾಗಿದ್ದು, ಈಗ ಧರ್ಮವಾಗಿ ಆಚರಣೆಯಾಗುತ್ತಿದೆ.

ಇತ್ತೀಚಿನ ಸುದ್ದಿ