ತಮಿಳಿನ ಖ್ಯಾತ ಹಾಸ್ಯನಟನ ಆರೋಗ್ಯ ಸ್ಥಿತಿ ಗಂಭೀರ - Mahanayaka

ತಮಿಳಿನ ಖ್ಯಾತ ಹಾಸ್ಯನಟನ ಆರೋಗ್ಯ ಸ್ಥಿತಿ ಗಂಭೀರ

17/11/2020

ಚೆನ್ನೈ:  ತಮಿಳಿನ ಖ್ಯಾತ ನಟರೊಬ್ಬರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಅವರು ಸದ್ಯ ಗುರುತಿಸಲು ಸಾಧ್ಯವಿಲ್ಲದಷ್ಟು ರೂಪದಲ್ಲಿ ಬದಲಾಗಿದ್ದಾರೆ.

thavasi

ಸುಮಾರು 30 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ನೆಗೆಟಿವ್ ಕ್ಯಾರೆಕ್ಟರ್ ಆಗಿ ಹಾಗೂ ಹಾಸ್ಯ ನಟರಾಗಿ ಜನರನ್ನು ರಂಜಿಸಿದ್ದ ಥವಾಸಿ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಲೈವ್ ಬಂದಿದ್ದ ಥವಾಸಿ ಅವರು ತಮ್ಮ ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಮಾಡಿ ಕಣ್ಣೀರು ಹಾಕಿದ್ದರು.

ನನಗೆ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ, ನನಗೆ ನಟನೆಗೆ ಮತ್ತೆ ಮರಳಲು ಆಸೆ ಇದೆ. ನನ್ನ ಸಹೋದ್ಯೋಗಿಗಳು ನನಗೆ ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ನೆರವು ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದರು.  ಡಿಎಂಕೆ ಶಾಸಕ ಸರವಣನ್ ಅವರು ಥವಾಸಿ ಅವರ ನೆರವಿಗೆ ಬಂದಿದ್ದಾರೆ.  ಮಾಧ್ಯಮ ವರದಿಗಳ ಬಳಿಕ ಅವರು ಥವಾಸಿ ಅವರಿಗೆ ನೆರವು ನೀಡಿದ್ದಾರೆ.

ಇತ್ತೀಚಿನ ಸುದ್ದಿ