ಶೂಟಿಂಗ್ ಗೆ ಬ್ರೇಕ್ ಹಾಕಿ ಪಂಜುರ್ಲಿ ದೈವದ ಕೋಲದಲ್ಲಿ ಭಾಗಿಯಾದ ನಟಿ ಅನುಷ್ಕಾ ಶೆಟ್ಟಿ
ಖ್ಯಾತ ನಟಿ ಅನುಷ್ಕಾ ಶೆಟ್ಟಿ ಶೂಟಿಂಗ್ ಗೆ ಸದ್ಯ ಬ್ರೇಕ್ ಹಾಕಿ ಇದೀಗ ತನ್ನ ತವರು ಜಿಲ್ಲೆ ಮಂಗಳೂರಿನಲ್ಲಿ ಪಂಜುರ್ಲಿ ದೈವದ ಕೋಲದಲ್ಲಿ ಭಾಗಿಯಾಗಿದ್ದಾರೆ.
ಬಾಹುಬಲಿ– 2ಸಕ್ಸಸ್ ನಂತರ `ನಿಶಬ್ಧಂ’ ಚಿತ್ರದಲ್ಲಿ ಕಾಣಿಸಿಕೊಂಡ ಮೇಲೆ ಯಾವುದೇ ಚಿತ್ರದಲ್ಲೂ ಕಾಣಿಸಿಕೊಳ್ಳದೇ ಅನುಷ್ಕಾ ಸೈಲೆಂಟ್ ಆಗಿದ್ದಾರೆ. ಆದರೆ ಈಗ ಹೊಸ ಪ್ರತಿಭೆ ನವೀನ್ ಶೆಟ್ಟಿ ಜೊತೆ ಹೊಸ ಚಿತ್ರದ ಮೂಲಕ ಸ್ವೀಟಿ ಕಮ್‌ಬ್ಯಾಕ್ ಮಾಡ್ತಿದ್ದಾರೆ.
ಈ ಚಿತ್ರ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ರಿಲೀಸ್‌ಗೆ ಸಜ್ಜಾಗಿರುವ ಬೆನ್ನಲ್ಲೇ ತಮ್ಮ ಮನೆಯ ಪಂಜುರ್ಲಿ ದೈವಕೋಲಕ್ಕೆ ಅನುಷ್ಕಾ ಕೂಡ ಭಾಗಿಯಾಗಿದ್ದಾರೆ. ದೈವದ ವೀಡಿಯೋ ಮಾಡ್ತಿರುವ ಅನುಷ್ಕಾ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಪ್ರತಿ ವರ್ಷದಂತೆ ಈ ವರ್ಷವು ಕೂಡ ಅನುಷ್ಕಾ ಕುಟುಂಬದಲ್ಲಿ ದೈವದ ಆರಾಧನೆ ಮಾಡಿದ್ದಾರೆ. ನಟಿ ಮೂಲತಃ ಮಂಗಳೂರಿನವರಾಗಿದ್ದು, ಭೂತಕೋಲವನ್ನು ಮಾಡುತ್ತಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw