ಪ್ರಕಾಶ್ ರೈ ಆರಂಭಿಸಿದ ಅಪ್ಪು ಎಕ್ಸ್’ಪ್ರೆಸ್ ಆಂಬುಲೆನ್ಸ್ ಸೇವೆಗೆ ಕೈ ಜೋಡಿಸಿದ ಮತ್ತಷ್ಟು ನಟರು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಅವರು ಆರಂಭಿಸಿರುವ ಅಪ್ಪು ಎಕ್ಸ್’ಪ್ರೆಸ್ ಆಂಬುಲೆನ್ಸ್ ಸೇವೆಗೆ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭರ್ಜರಿ ಪ್ರತಿಕ್ರಿಯೆ ಲಭಿಸಿದ್ದು, ಇನ್ನಷ್ಟು ನಟರು ಅಪ್ಪು ಎಕ್ಸ್’ಪ್ರೆಸ್ ಆಂಬುಲೆನ್ಸ್ ಕೊಡುಗೆ ನೀಡಲು ಮುಂದೆ ಬಂದಿದ್ದಾರೆ.
ತಮಿಳು ನಟ ಸೂರ್ಯ, ತೆಲುಗು ನಟ ಚಿರಂಜೀವಿ ಮತ್ತು ಶಿವರಾಜ್ ಕುಮಾರ್, ಯಶ್ ಕೂಡ ತಲಾ ಒಂದೊಂದು ಆಂಬುಲೆನ್ಸ್ ಕೊಡುಗೆ ನೀಡುವುದಾಗಿ ಪುನೀತ ಪರ್ವದಲ್ಲಿ ಘೋಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರೈ, ಅಪ್ಪು ಅವರು ಪ್ರಕೃತಿ ಪ್ರೇಮಿಯಾಗಿದ್ದರು. ಬೆಂಗಳೂರಿನಲ್ಲಿ ನಡೆದ ಪರಿಸರ ಕುರಿತಾದ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ. ಈ ವೇಳೆ ಅಲ್ಲಿ ಅಪ್ಪು ಕೂಡ ಇದ್ದರು. ಆಗ ನನಗೆ ಅಪ್ಪು ಒಬ್ಬ ಪ್ರಕೃತಿ ಪ್ರಿಯರು ಅನ್ನೋದು ತಿಳಿದು ಬಂದಿತ್ತು. ಇದೀಗ ಅಪ್ಪು ತಮ್ಮ ಪ್ರಕೃತಿಯ ಕುರಿತಾದ ಅಭಿರುಚಿಯೊಂದಿಗೆ ಬಹಳ ಇಷ್ಟಪಟ್ಟು ಗಂಧದ ಗುಡಿ ಸಿನಿಮಾವನ್ನು ಮಾಡಿದ್ದಾರೆ. ಎಲ್ಲರು ಕೂಡ ಈ ಸಿನಿಮಾವನ್ನು ವೀಕ್ಷಿಸಿ ಎಂದು ಕರೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka