ಫರಂಗಿಪೇಟೆ ಸ್ಟುಡಿಯೋ ಮಾಲಿಕ ಕೊಲೆಗೆ ಯತ್ನ | ಮೂವರು ಆರೋಪಿಗಳ ಬಂಧನ - Mahanayaka
3:19 PM Thursday 12 - September 2024

ಫರಂಗಿಪೇಟೆ ಸ್ಟುಡಿಯೋ ಮಾಲಿಕ ಕೊಲೆಗೆ ಯತ್ನ | ಮೂವರು ಆರೋಪಿಗಳ ಬಂಧನ

29/10/2020

ಫರಂಗಿಪೇಟೆ: ಫೋಟೋ ಗ್ರಾಫರ್ ನನ್ನು ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


 ಬುಧವಾರ ರಾತ್ರಿ ಫರಂಗಿಪೇಟೆಯಲ್ಲಿ ಸ್ಟುಡೀಯೋಗೆ ನುಗ್ಗಿ ಫೊಟೋಗ್ರಾಫರ್ ದಿನೇಶ್ ಕೊಟ್ಟಿಂಜ ಅವರ ಮೇಲೆ ದಾಳಿ ನಡೆಸಲಾಗಿದ್ದು, ಹತ್ಯೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿತ್ತು.


ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಮೊಹಮ್ಮದ್ ಹರ್ಷದ್(19), ಅಬ್ದುಲ್ ರಹಿಮಾನ್ (22), ಮೊಹಮ್ಮದ್ ಸೈಫುದ್ದೀನ್(22) ಇವರನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.



Provided by

ಆರೋಪಿಗಳು ಫೋಟೋ ತೆಗೆಸುವ ನೆಪದಲ್ಲಿ  ಬಂದು ದಿನೇಶ್ ಅವರನ್ನು ಹತ್ಯೆಗೈಯ್ಯಲು ಯತ್ನಿಸಿದ್ದಾರೆ. ಇತ್ತೀಚೆಗೆ ಕುಂಪನಮಜಲು ಎಂಬಲ್ಲಿ ಹೆಣ್ಣು ಮಗುವಿನ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಅವರು ಹೆಣ್ಣಿನ ಪರ ನಿಂತ ದ್ವೇಷದಿಂದ ಈ ಕೃತ್ಯ ಎಸಗಲಾಗಿದೆ ಎಂದು ವರದಿಯಾಗಿದೆ.


ಇತ್ತೀಚಿನ ಸುದ್ದಿ