ಮೆಣಸಿನ ತೋಟದಲ್ಲಿ ಬೆಳೆದಿದ್ದ 1.75ಲಕ್ಷ ರೂ ಮೌಲ್ಯದ ಗಾಂಜಾ ವಶ: ಆರೋಪಿಯ ಬಂಧನ - Mahanayaka
1:45 PM Saturday 25 - January 2025

ಮೆಣಸಿನ ತೋಟದಲ್ಲಿ ಬೆಳೆದಿದ್ದ 1.75ಲಕ್ಷ ರೂ ಮೌಲ್ಯದ ಗಾಂಜಾ ವಶ: ಆರೋಪಿಯ ಬಂಧನ

29/10/2020

ಬಳ್ಳಾರಿ: ಸಿರುಗುಪ್ಪ ಪೊಲೀಸ್ ಠಾಣೆಯ ಅಧಿಕಾರಿಗಳಾದ ಸಿ.ಪಿ.ಐ. ಟಿ.ಆರ್.ಪವಾರ ಹಾಗೂ ಪಿ.ಎಸ್.ಐ ಗಂಗಪ್ಪ ಬುರ್ಲಿ ಮತ್ತು ಸಿಬ್ಬಂದಿಗಳ ತಂಡವು ಖಚಿತ ಮಾಹಿತಿ ಮೇರೆಗೆ ಸಿರುಗುಪ್ಪ ತಾಲ್ಲೂಕಿನ ರಾರವಿ ಸಿಮೇಯ ಕರಿಲಿಂಗಪ್ಪ ತಂದೆ ಪಂಪಣ್ಣ ರವರು ಮೆಣಸಿನ ಗಿಡಗಳ ಜೊತೆಗೆ ಅಕ್ರಮವಾಗಿ ಬೆಳೆದಿದ್ದ 13 ಗಾಂಜಾ ಗಿಡಗಳು ಒಟ್ಟು 35 ಕೆಜಿ 200 ಗ್ರಾಂ ವಶ ಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಕಚೇರಿ ಪ್ರಕಟಣೆ ತಿಳಿಸಿದೆ.


ganja arrest


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಸೈದುಲು ಅಡಾವತ್ ಅವರ ನಿರ್ದೆಶನದ ಮೇರೆಗೆ ಮತ್ತು ಗ್ರಾಮೀಣ ಉಪವಿಭಾಗದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಸಿರುಗುಪ್ಪ ವೃತ್ತ ಕಛೇರಿಯ ಸಿ.ಪಿ.ಐ ಟಿ.ಆರ್.ಪವಾರ ಅವರ ನೇತೃತ್ವದಲ್ಲಿ ಹಾಗೂ ಸಹಾಯಕ ಕೃಷಿ ಅಧಿಕಾರಿಯಾದ ಪರಮೇಶ್ವರಪ್ಪ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಯವರು ಹಾಗೂ ಪೊಲೀಸ್ ಉಪನೀರಿಕ್ಷಕಾರಾದ ಗಂಗಪ್ಪ ಬುರ್ಲಿ ಹಾಗೂ ಸಿಬ್ಬಂದಿ ಅಂಬರೀಶ ,ಬಾಲಚಂದ್ರ ,ರವಿಚಂದ್ರ ಕೃಷ್ಣ ಮೂರ್ತಿ ,ವೆಂಕಟ ರಮಣರವರು ಪಿ ಎಸ್ ಐ (ಅಪರಾಧ) ನಾರಾಯಣ ಸ್ವಾಮಿ ರವರು ನೀಡಿದ ದೂರಿನ ಮೇರೆಗೆ ಬುಧವಾರ ದಾಳಿ ನಡೆಸಲಾಗಿದೆ.

ದಾಳಿ ನಡೆಸಿ ಬೆಳೆದು ನಿಂತಿದ್ದ ಗಾಂಜಾ ಬೆಳೆ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.


ಇತ್ತೀಚಿನ ಸುದ್ದಿ