ಮಾರಮ್ಮನ ಪ್ರಸಾದ ಸೇವಿಸಿ 70ಕ್ಕೂ ಅಧಿಕ ಜನ ಅಸ್ವಸ್ಥ - Mahanayaka

ಮಾರಮ್ಮನ ಪ್ರಸಾದ ಸೇವಿಸಿ 70ಕ್ಕೂ ಅಧಿಕ ಜನ ಅಸ್ವಸ್ಥ

28/10/2020

ಮಂಡ್ಯ: ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ ಮಕ್ಕಳು ಸೇರಿದಂತೆ 70ಕ್ಕೂ ಅಧಿಕ ಜನರು ಅಸ್ವಸ್ಥರಾದ ಘಟನೆ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಲಿಂಗಪಟ್ಟಣ ಗ್ರಾಮದಲ್ಲಿ ನಡೆದಿದೆ.


ದೇವಸ್ಥಾನದಲ್ಲಿ ಪ್ರತಿ ಮಂಗಳವಾರದಂತೆ ಸಂಜೆ ವಿಶೇಷ ಪೂಜೆ ನಡೆಸಿ ನಂತರ ಪೊಂಗಲ್ ಹಾಗೂ ಪುಳಿಯೊಗರೆ ತಯಾರಿಸಿ ಜನರಿಗೆ  ನೀಡಲಾಗಿತ್ತು. ಆದರೆ ಪ್ರಸಾದ ಇದನ್ನು ತಿಂದ ಬಳಿಕ ವಾಂತಿ ಭೇದಿ ಆರಂಭವಾಗಿದ್ದು, ಜನರು ಅಸ್ವಸ್ಥಗೊಂಡಿದ್ದಾರೆ.


ಅಸ್ವಸ್ಥರ ಪೈಕಿ ಶ್ರೇಯಾ(14), ದರ್ಶನ್(18), ಲಿಂಗೇಗೌಡ(41), ಜ್ಯೋತಿಕಾ(20), ಐಶ್ವರ್ಯ(17), ಶಿಲ್ಪಾ(28), ಲಿಖಿತಾ(19) ಎಂಬವರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿದೆ.Provided by

ಸಂತ್ರಸ್ತರಿಗೆ ಲಿಂಗಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 10 ಮಂದಿ ಹಲಗೂರು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


ಇತ್ತೀಚಿನ ಸುದ್ದಿ