ಮಹಾನಾಯಕ ಧಾರಾವಾಹಿಗೆ ಬೆದರಿಕೆ ಹಾಕಿದವರ ವಿರುದ್ಧ ರಾಕಿಂಗ್ ಸ್ಟಾರ್ ಯಶ್ ಗುಡುಗು |  ವಿರೋಧಿಸಿದವರ ಕೈಯಲ್ಲೇ ಚಪ್ಪಾಳೆ ತಗಳೋದು ಮಜಾ ಅಂದ್ರು ಯಶ್ - Mahanayaka
2:09 PM Saturday 2 - December 2023

ಮಹಾನಾಯಕ ಧಾರಾವಾಹಿಗೆ ಬೆದರಿಕೆ ಹಾಕಿದವರ ವಿರುದ್ಧ ರಾಕಿಂಗ್ ಸ್ಟಾರ್ ಯಶ್ ಗುಡುಗು |  ವಿರೋಧಿಸಿದವರ ಕೈಯಲ್ಲೇ ಚಪ್ಪಾಳೆ ತಗಳೋದು ಮಜಾ ಅಂದ್ರು ಯಶ್

28/10/2020

ಮಹಾನಾಯಕ ಡಾಟ್ ಇನ್ ವರದಿ: ಜೀ ಕನ್ನಡ ಕುಟುಂಬ ಅವಾರ್ಡ್ ನಲ್ಲಿ ಡಬ್ಬಿಂಗ್ ಧಾರಾವಾಹಿಗಳಲ್ಲಿ ಪ್ರಶಸ್ತಿ ಗೆದ್ದ ಮಹಾನಾಯಕ ಧಾರಾವಾಹಿಯ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಅದ್ಭುತವಾಗಿ ಮಾತನಾಡಿದ್ದಾರೆ. ಡಾ.ಬಿ,ಆರ್.ಅಂಬೇಡ್ಕರ್ ಅವರ ಧಾರಾವಾಹಿ ಮಾಡಿ ಸಣ್ಣಪುಟ್ಟದ್ದಕ್ಕೆಲ್ಲ ಹೆದರಿಕೊಂಡರೆ ಅರ್ಥವಿಲ್ಲ ಎಂದು ಯಶ್ ಅವರು ರಾಘವೇಂದ್ರ ಹುಣಸೂರು ಅವರಿಗೆ ಬೆದರಿಕೆ ಹಾಕಿರುವ ವಿಚಾರವನ್ನು ಖಂಡಿಸಿದರು. 

ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ಒಂದು ಸೀರಿಯಲ್ ಮಾಡಿ, ಸಣ್ಣಪುಟ್ಟ ಸಮಸ್ಯೆಗೆಲ್ಲ ಹೆದರಿಕೊಂಡರೆ,  ಆ ವ್ಯಕ್ತಿ ಬದುಕಿಗೆ ಅರ್ಥನೇ ಇರಲ್ಲ. ಎಲ್ಲರೂ ನಿಮ್ಮನ್ನು ಅನುಮಾನ ಪಡುತ್ತಿರಬೇಕಾದರೆ ಅವರ ಎದುರೇ ಗೆದ್ದು, ಲಾಸ್ಟ್ ಲ್ಲಿ ಅವರ ಕೈಯಲ್ಲೇ ಚಪ್ಪಾಳೆ  ತಗಳೋದರಲ್ಲಿ ಇದ್ಯಲ್ಲ ಮಜಾ ಅದು ಬೇರೆಲ್ಲೂ ಇರುವುದಿಲ್ಲ. ಹಾಗಾಗಿಯೇ ಇಷ್ಟು ವರ್ಷವಾದರೂ ಅವರನ್ನು ಸೆಲೆಬ್ರೇಟ್ ಮಾಡುವಲ್ಲಿ ಇಂದು ನಿಂತಿದೆ ಎಂದು ಯಶ್ ಹೇಳಿದರು.


ಮಹಾನಾಯಕ ಧಾರಾವಾಹಿ ಬಂದ ಬಳಿಕ ಅಡ್ಡ ಧ್ವನಿಗಳು ಬೆದರಿಕೆಗಳು ಎಲ್ಲವೂ ಬರಲು ಆರಂಭವಾಯಿತು. ಈ ಸಂದರ್ಭದಲ್ಲಿ ಒಂದು ಧ್ವನಿಯ ಕರೆ ಬರುತ್ತೆ, ಅದೇನು ಆಗುತ್ತೆ ಆಗಲಿ ಚಿನ್ನಾ, ನಾನಿದ್ದೀನಿ ಇದಕ್ಕೆ ಅಂತ ಎಂದು ಆ ಧ್ವನಿ ರಾಕಿಂಗ್ ಸ್ಟಾರ್ ಯಶ್ ಅವರದ್ದಾಗಿತ್ತು ಎಂದು ರಾಘವೇಂದ್ರ ಹುಣಸೂರು ಆರಂಭದಲ್ಲಿ ಪರಿಚಯ ಮಾಡುತ್ತಾರೆ.


ಮಹಾನಾಯಕ ಧಾರಾವಾಹಿಗೆ ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚಾನೆಲ್ ಮುಖ್ಯಸ್ಥರಿಗೆ ಇಡೀ ಕರ್ನಾಟಕದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಇದೇ ಸಂದರ್ಭದಲ್ಲಿ ಯಾವುದೇ ಬೆದರಿಕೆಗಳಿಗೆ ಜಗ್ಗುವುದಿಲ್ಲ. ಮಹಾನಾಯಕ ಧಾರಾವಾಹಿ ನಿಲ್ಲಿಸುವುದಿಲ್ಲ ಎಂದ ರಾಘವೇಂದ್ರ ಹುಣಸೂರು ವಿಕೃತರಿಗೆ ನೇರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ರವಾನಿಸಿದ್ದರು.


ಇತ್ತೀಚಿನ ಸುದ್ದಿ