ಹಾರ್ದಿಕ್ ಪಾಂಡ್ಯ ಅವರ ಈ ವರ್ತನೆಯೇ ಡಿವೋರ್ಸ್ ಗೆ ಕಾರಣವಂತೆ!
ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಜನಪ್ರಿಯ ಮಾಡೆಲ್ ನತಾಶಾ ಸ್ಟಾಂಕೋವಿಕ್ ಅವರ ಡಿವೋರ್ಸ್ ಇತ್ತೀಚೆಗೆ ಸಾಕಷ್ಟು ಸುದ್ದಿಯಾಗಿತ್ತು. ಒಂದು ಹಂತದಲ್ಲಿ ನತಾಶಾ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಆದ್ರೆ ಇದೀಗ ನತಾಶಾ ಫ್ರೆಂಡ್ ವೊಬ್ಬರು, ಇವರಿಬ್ಬರ ಡಿವೋರ್ಸ್ ಗೆ ಅಸಲಿ ಕಾರಣ ಏನು ಎನ್ನುವುದನ್ನು ಬಯಲು ಮಾಡಿದ್ದಾರೆ.
ಜುಲೈ 18ರಂದು ಸಾಮಾಜಿಕ ಜಾಲತಾಣದ ಮೂಲಕ ಇಬ್ಬರು ತಮ್ಮ ವಿಚ್ಛೇದನವನ್ನು ಖಚಿತಪಡಿಸಿದ್ದರು. ಹಾರ್ದಿಕ್ ಪಾಂಡ್ಯ ಅವರ ಕೆಲವು ವರ್ತನೆಗಳೇ ಡಿವೋರ್ಸ್ ಗೆ ಕಾರಣವಾಗಿದೆ ಅಂತ ನತಾಶಾ ಆಪ್ತರೊಬ್ಬರು ರಾಷ್ಟ್ರೀಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರ ಇಗೋ, ನಾನೇ ಗ್ರೇಟ್ ಎನ್ನುವ ವರ್ತನೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ನತಾಶಾ ಅವರೇ ಮೊದಲು ವಿಚ್ಛೇದನ ನಿರ್ಧಾರಕ್ಕೆ ಬಂದ್ರಂತೆ. ಪಾಂಡ್ಯನ ವರ್ತನೆಯನ್ನು ನತಾಶಾ ಸಾಕಷ್ಟು ಸಹಿಸಿಕೊಂಡರು. ಆದರೆ ಆ ವರ್ತನೆ ಮಿತಿ ಮೀರಿದಾಗ ಅಂತಿಮವಾಗಿ ನಿರ್ಧಾರ ತೆಗೆದುಕೊಂಡರು ಎಂದು ಅವರು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಯಾವಾಗಲೂ ತನ್ನ ಸ್ವಂತ ವ್ಯವಹಾರಗಳಿಗೆ ಮಾತ್ರ ಪ್ರಾಮುಖ್ಯತೆ ನೀಡುತ್ತಿದ್ದನು. ತನ್ನ ಬಿಜಿನೆಸ್ ಬಗ್ಗೆಯೇ ಹೆಚ್ಚು ಯೋಚಿಸುತ್ತಿದ್ದ. ಸದಾ ಸ್ಟೈಲಿಶ್ ಆಗಿ ಇರಲು ಪ್ರಯತ್ನಿಸುವ ಹಾರ್ದಿಕ್, ಜನರ ಗಮನವನ್ನು ತನ್ನಡೆಗೆ ಸೆಳೆಯಲು ಬಯಸುತ್ತಾರೆ. ಮೊದಲಿಗೆ ಇದೆಲ್ಲವನ್ನು ನತಾಶಾ ಸಹಿಸಿಕೊಂಡರು. ಆದರೆ, ಹಾರ್ದಿಕ್ ಮತ್ತು ತನ್ನ ನಡುವೆ ಸಾಕಷ್ಟು ವ್ಯತ್ಯಾಸಗಳು ಇವೆ ಎಂಬುದನ್ನು ಅರಿತುಕೊಂಡ ಬಳಿಕ ಡಿವೋರ್ಸ್ ನಿರ್ಧಾರಕ್ಕೆ ಬಂದರು ಎಂದು ನತಾಶಾ ಫ್ರೆಂಡ್ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth