ಡಿಕೆಶಿಗೆ ಬೆಳಗಾವಿ ಕುಕ್ಕರ್ ಅಂದ್ರೆ ಹೆಚ್ಚು ಪ್ರೀತಿ: ಶಾಸಕ ಯತ್ನಾಳ್ ಟಾಂಗ್
ಕಲಬುರಗಿ: ಡಿ.ಕೆ.ಶಿವಕುಮಾರ್ ಅವರಿಗೆ ಮಂಗಳೂರಿನ ಕುಕ್ಕರ್ ಜೊತೆಗೆ ಬೆಳಗಾವಿಯ ಕುಕ್ಕರ್ ಮೇಲೆ ಹೆಚ್ಚು ಪ್ರೀತಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇ ಆರ್ ಆಲ್ ಮೈ ಬ್ರದರ್ಸ್ ಅಂತ ಡಿಕೆಶಿ ಹೇಳುತ್ತಿರುತ್ತಾರೆ. ಭಯೋತ್ಪಾದಕರು ಕೂಡ ಡಿಕೆಶಿಯ ಬ್ರದರ್ಸ್ ಎಂದರು.
ಡಿಕೆಶಿಗೆ ಕುಕ್ಕರ್ ಮೇಲೆ ಬಹಳ ಪ್ರೀತಿ ಇದೆ. ಮಂಗಳೂರು ಕುಕ್ಕರ್ ಜೊತೆಗೆ ಬೆಳಗಾವಿ ಕುಕ್ಕರ್ ಮೇಲೆ ಹೆಚ್ಚು ಪ್ರೀತಿ ಎಂದ ಅವರು, ಒಟ್ಟಾರೆಯಾಗಿ ಡಿಕೆಶಿಗೆ ಕುಕ್ಕರ್ ಎಂದ್ರೆ ಬಹಳ ಪ್ರೀತಿ ಹಾಗಾಗಿ ಶಾರೀಕ್ ವಿಚಾರದಲ್ಲಿ ಆ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಚುಚ್ಚಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka