ಬೆಳ್ತಂಗಡಿ: ಹೆಣ ಬಿದ್ದ ಬಳಿಕ ಎಚ್ಚೆತ್ತುಕೊಂಡ ಪಟ್ಟಣ ಪಂಚಾಯತ್: ಅನಧಿಕೃತ ಬ್ಯಾನರ್ ತೆರವು
ಬೆಳ್ತಂಗಡಿ: ನಗರದಲ್ಲಿ ಬ್ಯಾನರ್ ಅಳವಡಿಸುವ ವೇಳೆ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಆಘಾತಕ್ಕೆ ವ್ಯಕ್ತಿಯೋರ್ವ ಮೃತಪಟ್ಟ ಬೆನ್ನಲ್ಲಿಯೇ ನಗರದಾದ್ಯಂತ ಇದ್ದ ಅನಧಿಕೃತ ಬ್ಯಾನರ್ ಗಳನ್ನು ರಾತ್ರಿಯ ವೇಳೆಯೇ ಪಟ್ಟಣ ಪಂಚಾಯತ್ ಆಡಳಿತ ತೆರವುಗೊಳಿಸಿದೆ.
ನಗರದ ಹಲವೆಡೆಗಳಲ್ಲಿ ವಿದ್ಯುತ್ ಕಂಬಗಳ ಮೇಲೆಯೇ ಫ್ಲೆಕ್ಸ್ , ಬ್ಯಾನರ್ ಗಳನ್ನು ಹಾಕಲಾಗಿತ್ತು. ನಗರದಾದ್ಯಂತ ಯಾವ ಅನುಮತಿಯೂ ಇಲ್ಲದೆ ಹತ್ತಾರು ಬ್ಯಾನರ್ ಗಳು ಇದ್ದವು ಇದೀಗ ಇದೆಲ್ಲವನ್ನೂ ತೆರವು ಗೊಳಿಸಲಾಗಿದೆ. ವಿದ್ಯುತ್ ಲೈನ್ ನಿಂದ ಯಾವುದೇ ಅಂತರ ಪಾಲಿಸದೆ ಬ್ಯಾನರ್ ಗಳನ್ನು ಅಳವಡಿಸಲಾಗುತ್ತಿದ್ದು, ಹೆಚ್ಚಿನೆಡೆ ವಿದ್ಯುತ್ ಕಂಬಗಳ ಮೇಲೆಯೇ ಬ್ಯಾನರ್ ಗಳನ್ನು ಹಾಕಲಾಗಿತ್ತು.
ಮೆಸ್ಕಾಂಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯತ್ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿರಲಿಲ್ಲ. ಇದೀಗ ಬ್ಯಾನರ್ ಅಳವಡಿಸುವ ವೇಳೆ ಯುವಕ ಸಾವನ್ನಪ್ಪಿದ ಹಿನ್ನಲೆಯಲ್ಲಿ ಪಟ್ಟಣ ಪಂಚಾಯತ್ ಆಡಳಿತವನ್ನು ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು ಕೊನೆಗೂ ಎಚ್ಚೆತ್ತುಕೊಂಡ ಅಧಿಕಾರಿಗಳು ನಗರದಲ್ಲಿದ್ದ ಎಲ್ಲ ಬ್ಯಾನರ್ ಗಳನ್ನು ತೆರವು ಗೊಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka