ಕುಡಿದು ವಾಹನ ಚಲಾಯಿಸುವವರಿಗೆ ಬಿಸಿಮುಟ್ಟಿಸಿದ ಪೊಲೀಸರು! - Mahanayaka
4:59 PM Saturday 14 - December 2024

ಕುಡಿದು ವಾಹನ ಚಲಾಯಿಸುವವರಿಗೆ ಬಿಸಿಮುಟ್ಟಿಸಿದ ಪೊಲೀಸರು!

drunken drive
16/09/2024

ಬೆಂಗಳೂರು: ಮದ್ಯ ಚಲಾಯಿಸಿ ವಾಹನ ಸಂಚರಿಸುವವರು ಸಂಚಾರ ವ್ಯವಸ್ಥೆಗೆ ಸವಾಲಾಗಿದ್ದಾರೆ. ಮದ್ಯ ಚಲಾಯಿಸಿ ವಾಹನ ಚಲಾಯಿಸುತ್ತಿರುವುದು  ಅವಘಡ, ಸಾವು ನೋವಿಗೆ ಕಾರಣವಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ನಗರ ಸಂಚಾರ ಪೊಲೀಸರು ಕಳೆದೊಂದು ವಾರದಲ್ಲಿ ಸಾವಿರಾರು ವಾಹನಗಳನ್ನು ತಪಾಸಣೆ ಮಾಡಿದ್ದಾರೆ.

ಸೆಪ್ಟೆಂಬರ್​ 9ರಿಂದ 15ರ ವರೆಗೆ ನಡೆಸಿದ ತಪಾಸಣೆಯಲ್ಲಿ ನಗರದಲ್ಲಿ 57,717 ವಾಹನಗಳನ್ನು ತಡೆಗಟ್ಟಿ 870 ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಾದರೆ ವಾಹನ ಜಪ್ತಿ ಜೊತೆಗೆ ನ್ಯಾಯಾಲಯದಲ್ಲಿ ದಂಡ ಪಾವತಿಸಬೇಕಿದೆ. ಸುಮಾರು 10 ಸಾವಿರ ರೂ.ಗಳಿಂದ ಗರಿಷ್ಠ 25 ಸಾವಿರ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ.

ರಾತ್ರಿ ವೇಳೆ ಹೆಚ್ಚಿನ ಅಪಘಾತಗಳು ಕುಡಿದು ವಾಹನ ಚಲಾಯಿಸಿದ ಕಾರಣದಿಂದಲೇ ನಡೆಯುತ್ತಿದೆ. ಕುಡಿದು ಸ್ನೇಹಿತರೊಂದಿಗೆ ಜಾಲಿರೈಡ್ ನಡೆಸುವ ಯುವಕರು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುತ್ತಿರುವುದಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ