ಬಿಗ್ ಬ್ರೇಕಿಂಗ್ ನ್ಯೂಸ್: ರಾಜ್ಯದಲ್ಲಿ ಮತ್ತೊಂದು ಬೋರ್ ವೇಲ್ ದುರಂತ

ಬೆಳಗಾವಿ: ಎರಡೂವರೆ ವರ್ಷ ವಯಸ್ಸಿನ ಮಗು ಬೋರ್ ವೇಲ್ ನೊಳಗೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಕನೂರ ಗ್ರಾಮದಲ್ಲಿ ನಡೆದಿದ್ದು, ಆಟವಾಡುತ್ತಿದ್ದ ವೇಳೆ ಬೋರ್ ವೇಲ್ ನೊಳಗೆ ಬಿದ್ದಿರುವುದಾಗಿ ತಿಳಿದು ಬಂದಿದೆ.
ಶರತ್ ಹಸಿರೇ ಎಂಬ ಮಗು ಬೋರ್ ವೇಲ್ ನೊಳಗೆ ಬಿದ್ದಿರುವ ಮಗುವಾಗಿದ್ದು, ಮನೆಯ ಬಳಿಯಲ್ಲಿ ಆಟವಾಡುತ್ತಿದ್ದ ವೇಳೆ ನಿನ್ನೆ ಮಗು ನಾಪತ್ತೆಯಾಗಿದ್ದು, ತೀವ್ರ ಹುಡುಕಾಡದ ವೇಳೆ ಬೋರ್ ವೇಲ್ ನೊಳಗೆ ಬಿದ್ದಿರುವುದಾಗಿ ತಿಳಿದು ಬಂದಿದೆ ಎಂದು ಹೇಳಲಾಗಿದೆ.
ಮನೆಯಿಂದ 200 ಮೀಟರ್ ದೂರದಲ್ಲಿ ಬೋರ್ವೆಲ್ ಕೊರೆಸಲಾಗಿದ್ದು, ಮಗುವಿನ ಕುಟುಂಬದವರು ತೋಟದ ಮನೆಯಲ್ಲಿ ವಾಸವಾಗಿದ್ದಾರೆ. ಸುಮಾರು 15 ಅಡಿ ಆಳದಲ್ಲಿ ಶರತ್ ಸಿಲುಕಿರುವ ಮಾಹಿತಿ ಗೊತ್ತಾಗಿದೆ. ರಕ್ಷಣೆಗಾಗಿ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.
ಇನ್ನಷ್ಟು ಸುದ್ದಿಗಳು…
12 ವರ್ಷಗಳ ಬಳಿಕ ಒಂದಾದ ತಾಯಿ ಮಗ | ವಿಶ್ವಾಸದ ಮನೆಯಲ್ಲೊಂದು ಭಾವನಾತ್ಮಕ ಸನ್ನಿವೇಶ
JCI: “ಕ್ಷಯ ಮುಕ್ತ ಭಾರತ” ಜಾಗೃತಿ ಮೂಡಿಸಲಿರುವ ‘ಹೆಜ್ಜೆ ಬದಲಾದಾಗ’ ಕಿರುಚಿತ್ರ
ಯಾವುದೇ ಸಮುದಾಯ ಅಥವಾ ಧರ್ಮಗಳಿಗೆ ನೋವುಂಟು ಮಾಡಿದರೆ ಒಳ್ಳೆಯದಾಗುವುದಿಲ್ಲ | ಶೋಭಾ ಕರಂದ್ಲಾಜೆ
ದೇವಸ್ಥಾನದಲ್ಲಿ ಕೇಳಬಾರದ ಪ್ರಶ್ನೆ ಕೇಳಿದ ಪತ್ರಕರ್ತನ ವಿರುದ್ಧ ನಟಿ ಸಮಂತಾ ಆಕ್ರೋಶ!
ಮೋದಿಜಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದವರಿಗಿಂತ ಉದ್ಯೋಗ ಕೇಳಿದವರ ಸಂಖ್ಯೆಯೇ ಹೆಚ್ಚು!