ಇಬ್ಬರು ಮಾಜಿ ಪತ್ನಿಯರ ಸಮ್ಮುಖದಲ್ಲಿ ಮೂರನೇ ಮದುವೆಯಾದ 61ರ ಬಾಲಿವುಡ್ ನಟ ಆಮೀರ್ ಖಾನ್: ಮಕ್ಕಳೂ ಭಾಗಿ - Mahanayaka

ಇಬ್ಬರು ಮಾಜಿ ಪತ್ನಿಯರ ಸಮ್ಮುಖದಲ್ಲಿ ಮೂರನೇ ಮದುವೆಯಾದ 61ರ ಬಾಲಿವುಡ್ ನಟ ಆಮೀರ್ ಖಾನ್: ಮಕ್ಕಳೂ ಭಾಗಿ

aamir khan
05/07/2026

ಮುಂಬೈ: ಬಾಲಿವುಡ್‌ನ “ಮಿಸ್ಟರ್ ಪರ್ಫೆಕ್ಟ್‌ಷನಿಸ್ಟ್” ಆಮೀರ್ ಖಾನ್ ಅವರು ಇಂದು (ಜುಲೈ 5, 2026) ಉದ್ಯಮಿ ಗೌರಿ ಸ್ಪ್ರಾಟ್ ಅವರೊಂದಿಗೆ ಅಧಿಕೃತವಾಗಿ ವಿವಾಹವಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಆಮೀರ್ ಖಾನ್ ಅವರ ನಿವಾಸದಲ್ಲಿ ಅತ್ಯಂತ ಆಪ್ತರು ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಈ ಜೋಡಿ ರಿಜಿಸ್ಟರ್ಡ್ ಮ್ಯಾರೇಜ್ (ವಿವಾಹ ನೋಂದಣಿ) ಮಾಡಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.

ನವದಂಪತಿಗಳು ಅಧಿಕೃತ ದಾಖಲೆಗಳಿಗೆ ಸಹಿ ಹಾಕುತ್ತಿರುವ ಮೊದಲ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಮಾಜಿ ಪತ್ನಿಯರ ಸಮ್ಮುಖದಲ್ಲಿ ಮದುವೆ!

ಈ ಸರಳ ವಿವಾಹ ಕಾರ್ಯಕ್ರಮದಲ್ಲಿ ಆಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಮಕ್ಕಳಾದ ಜುನೈದ್ ಖಾನ್ ಮತ್ತು ಇರಾ ಖಾನ್ ಮುಂಚಿತವಾಗಿಯೇ ಆಗಮಿಸಿದ್ದರು.

ವಿಶೇಷವೆಂದರೆ, ಆಮೀರ್ ಖಾನ್ ಅವರ ಇಬ್ಬರೂ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಈ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡು ನವದಂಪತಿಗೆ ಹರಸಿರುವುದು ಈ ಮದುವೆಯ ಪ್ರಮುಖ ಆಕರ್ಷಣೆಯಾಗಿತ್ತು.

ಚಿತ್ರ ನಿರ್ದೇಶಕ ಅಶುತೋಷ್ ಗೋವಾರಿಕರ್, ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸೇರಿದಂತೆ ಹಲವು ಆಪ್ತ ಗಣ್ಯರು ಈ ಖಾಸಗಿ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಆಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಸುಮಾರು 25 ವರ್ಷಗಳ ಹಿಂದೆಯೇ ಮೊದಲ ಬಾರಿಗೆ ಭೇಟಿಯಾಗಿದ್ದರು. ಆದರೆ, 2024ರಲ್ಲಿ ಆಮೀರ್ ಅವರ ಸೋದರಸಂಬಂಧಿ ನುಝತ್ ಖಾನ್ ಅವರ ಮೂಲಕ ಬೆಂಗಳೂರಿನಲ್ಲಿ ಇಬ್ಬರೂ ಮತ್ತೆ ಸಂಪರ್ಕಕ್ಕೆ ಬಂದಿದ್ದರು. ಆ ಸಮಯದಲ್ಲಿ ಗೌರಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಅಲ್ಲಿಂದಲೇ ಇವರ ನಡುವೆ ಪ್ರೀತಿ ಚಿಗುರಿತ್ತು.

ಕಳೆದ ಮಾರ್ಚ್ 2025 ರಲ್ಲಿ ತಮ್ಮ 60 ನೇ ಹುಟ್ಟುಹಬ್ಬವನ್ನು ಆಚರಿಸುವಾಗ ಆಮೀರ್ ಖಾನ್ ಅವರು ಗೌರಿ ಅವರನ್ನು ಸಾರ್ವಜನಿಕವಾಗಿ ತಮ್ಮ “ಸಂಗಾತಿ” ಎಂದು ಪರಿಚಯಿಸಿದ್ದರು. ಈಗ 61ನೇ ವಯಸ್ಸಿನಲ್ಲಿ ಇಬ್ಬರೂ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ