ನವೆಂಬರ್ 26 ಸಂವಿಧಾನ ಅರ್ಪಣೆ ದಿನ: ಹೊಸ ಸಂವಿಧಾನ ಗೀತೆ ಬಿಡುಗಡೆ ಮಾಡಿದ BVS
ಬೆಂಗಳೂರು: ನವೆಂಬರ್ 26 ಸಂವಿಧಾನ ಅರ್ಪಣೆ ದಿನ ಹಾಗೂ ಜನವರಿ 26ರ ಸಂವಿಧಾನ ಜಾರಿಯಾದ ದಿನಗಳ ಅಂಗವಾಗಿ ಭಾರತೀಯ ವಿದ್ಯಾರ್ಥಿ ಸಂಘ(BVS) ವತಿಯಿಂದ ಹೊಸ ಸಂವಿಧಾನ ಗೀತೆ ಬಿಡುಗಡೆಯಾಗಿದೆ.
ಈ ಗೀತೆಯನ್ನು ಸೋಸಲೆ ಗಂಗಾಧರ್ ಅವರು ರಚಿಸಿ ರಾಗ ಸಂಯೋಜನೆ ಮಾಡಿದ್ದಾರೆ. ಡಾ.ಶಿವಕುಮಾರ್, ಸಿದ್ದೇಶ್ ಬದನವಾಳು ಗಾಯನ ಮಾಡಿದ್ದಾರೆ. ಎಂ.ಎಸ್.ಮಾರುತಿ ಸಂಗೀತ ನೀಡಿದ್ದಾರೆ. ಹರಿರಾಮ್ ಎ. ನಿರೂಪಿಸಿದ್ದಾರೆ. ಸುನೀಲ್ ಬಾಫುಲೆ ಆರ್ಥಿಕ ಸಹಕಾರ ನೀಡಿದ್ದಾರೆ. ಅಶ್ವಿನ್ ಚೆಂಡ್ತಿಮಾರ್ ಛಾಯಾಗ್ರಹಣ ಮಾಡಿದ್ದು, ವಿನಯ್ ಕುಮಾರ್ ಎ. ಸಂಕಲನದಲ್ಲಿ ಈ ಹಾಡು ಮೂಡಿ ಬಂದಿದೆ.
ಪದ್ಮಪಾಣಿ ಮ್ಯೂಸಿಕ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಈಗಾಗಲೇ ಈ ಗೀತೆ ಬಿಡುಗಡೆಗೊಂಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ಈ ಹಾಡಿಗೆ ಹೆಚ್ಚಿನ ಮಹತ್ವ ದೊರೆತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka