ನನ್ನ ಮಗನನ್ನು ಮಚ್ಚಿನಿಂದ ತಲೆ, ಬೆನ್ನಿಗೆ ಹೊಡೆದು ಕೊಲೆ ಮಾಡಿದ್ದಾರೆ: ರೇಣುಕಾಚಾರ್ಯ
ದಾವಣಗೆರೆ: ಮಚ್ಚಿನಿಂದ ತಲೆ, ಬೆನ್ನಿಗೆ ಹೊಡೆದಿದ್ದಾರೆ, ಬಟ್ಟೆಯಿಂದ ಆತನ ಕಾಲು ಕಟ್ಟಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಚಂದ್ರಶೇಖರ್ ನಿಗೂಢ ಸಾವಿನ ಕುರಿತು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.
ನನ್ನ ಮಗನ ಸಾವು ಅಹಜ ಸಾವು ಅಲ್ಲ. ನನ್ನ ಮಗ ಕಿಡ್ನಾಪ್ ಆಗಿದ್ದಾನೆ ಎಂದು ಪೊಲೀಸರಿಗೆ ಮೊದಲೇ ಹೇಳಿದ್ದೇನೆ. ಪೊಲೀಸರು ಹುಡುಕಾಟ ನಡೆಸಿದ್ರು. ಆದ್ರೆ ಅವನ ಮೃತದೇಹ ಪತ್ತೆಯಾಗಿದೆ ಎಂದು ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು.
ಪೊಲೀಸರು ತನಿಖೆ ನಡೆಸಿ ನ್ಯಾಯ ಒದಗಿಸಲಿ. ನಮಗೆ ದೇವರೇ ನ್ಯಾಯ ಕೊಡಿಸಬೇಕು. ನನ್ನ ಮಗ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿದ್ದ. ನಮ್ಮ ಮನೆಯ ನಂದಾದೀಪ ಹಾರಿ ಹೋಗಿದೆ. ನನ್ನ ಜೊತೆಗೆ ಕ್ಷೇತ್ರದಲ್ಲಿ ಬೆಂಬಲವಾಗಿದ್ದ. ಜನರ ಪ್ರೀತಿಗಳಿಸಿದ್ದ ಎಂದು ಭಾವುಕರಾದರು.
ನನ್ನ ಮಗ ಬಹಳ ಬೇಗ ಬೆಳೆಯುತ್ತಿದ್ದ. ಸದಾ ಕೇಸರಿ ಶಾಲು, ಪಿಂಕ್ ಶರ್ಟ್ ಧರಿಸುತ್ತಿದ್ದ. ಇದನ್ನು ನೋಡಿ ಕೆಲವರು ಸಹಿಸುತ್ತಿರಲಿಲ್ಲ. ನನ್ನ ರಾಜಕಾರಣಕ್ಕೆ ಬೆನ್ನೆಲುಬಾಗಿ ನಿಂತಿದ್ದ. ನನ್ನ ಮಗನ ಸಾವಿಗೆ ನಾನೇ ಕಾರಣನಾಗಿಬಿಟ್ಟೆ. ಹೇಡಿಗಳು ನನ್ನನ್ನು ಬಲಿ ತೆಗೆದುಕೊಳ್ಳಬೇಕಿತ್ತು, ಆದರೆ ನನ್ನ ಮಗನನ್ನು ಬಲಿ ತೆಗೆದುಕೊಂಡರು ಎಂದು ಬೇಸರ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka